



ಹೆಬ್ರಿ: ಗುಣಮಟ್ಟದ ತರಬೇತಿಯ ಜೊತೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕಳೆದ ಹತ್ತು ವರ್ಷಗಳಿಂದ ಶಿಕ್ಷಣ ಮತ್ತು ಕಲಾ ಪ್ರಕಾರದ ಸೇವೆ ಸಲ್ಲಿಸುತ್ತಿರುವ ಹೆಬ್ರಿಯ ಚಾಣಕ್ಯ ಸಂಸ್ಥೆಯ ಪರಿಶ್ರಮ ಶ್ಲಾಘನೀಯ ಎಂದು ಮುನಿಯಾಲು ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು ಹೇಳಿದರು.
ಅವರು ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಅನಂತಪದ್ಮನಾಭ ಸನ್ನಿಧಿ ಸಭಾಂಗಣ ಹೆಬ್ರಿ ಇವರ ಸಹಯೋಗದೊಂದಿಗೆ ವಾಯ್ಸ್ ಆಫ್ ಚಾಣಕ್ಯ -2024 ರಾಜ್ಯಮಟ್ಟದ ಸಂಗೀತ ಸಮರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿ ಭಾಸ್ಕರ್ ಜೋಯಿಸ್ ವಹಿಸಿ ಮಾತನಾಡಿ ಪರಿಶ್ರಮ ಇದ್ದಾಗ ಯಶಸ್ಸು ಖಂಡಿತ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದರು.
ಚಾಣಕ್ಯ ಸಂಸ್ಥೆಯಲ್ಲಿ ಕಲಾ ಪ್ರಕಾರದ ತರಬೇತಿಯ ಆರಂಭದ ಮೊದಲ ಗುರುವಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಅಂತರಾಷ್ಟೀಯ ಮಟ್ಟದ ಚಿತ್ರಕಲಾವಿದರಾಗಿ ಗುರುತಿಸಿಕೊಂಡಿರುವ ಪುನೀತ್ ಎಸ್.ಮೈಸೂರು ಅವರಿಗೆ ಚಾಣಕ್ಯ ಕಲಾರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಾಣಕ್ಯ ಕಲಾರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ ಪುನೀತ್ ಮಾತನಾಡಿ ನನಗೆ ಇದುವರೆಗೆ ಸಿಕ್ಕಿದ ಎಲ್ಲಾ ಪ್ರಶಸ್ತಿಗಿಂತ ಚಾಣಕ್ಯ ಸಂಸ್ಥೆ ನೀಡಿದ ಪ್ರಶಸ್ತಿ ತುಂಬಾ ಸಂತಸ ತಂದಿದೆ. ನನ್ನ ಕಲಾ ಪ್ರಕಾರದ ಪ್ರಯಣ ಆರಂಭವಾಗಿದ್ದೆ ಚಾಣಕ್ಯ ದಿಂದ. ಆದ್ದರಿಂದ ಚಾಣಕ್ಯ ಸಂಸ್ಥೆ ಹಾಗೂ ಸಂಸ್ಥೆಯ ರೂವಾರಿ ಉದಯ್ ಕುಮಾರ್ ಶೆಟ್ಟಿ ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಯಾವುದೇ ಪ್ರತಿಫಲ ಅಪೇಕ್ಷೆಯನ್ನು ಬಯಸಿದೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಣ ಮತ್ತು ಕಲಾ ಸೇವೆಯನ್ನು ನಡೆಯುತ್ತಿರುವ ಚಾಣಕ್ಯ ಸಂಸ್ಥೆಯ ರೂವಾರಿ ಉದಯ್ ಕುಮಾರ್ ಶೆಟ್ಟಿ ಅವರನ್ನು ಗುರುತಿಸುವ ಕೆಲಸವಾಗಬೇಕು ಎಂದು ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘ (ನಿ) ಪೆರ್ಡೂರು ಇದರ ಅಧ್ಯಕ್ಷ ಕೆ. ಶಾಂತರಾಮ ಸೂಡ ಹೇಳಿದರು.
ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು ಹಾಗೂ ನ್ಯಾಚುರಲ್ ಹರ್ಬ್ಸ ಪ್ರವೇಟ್ ಲಿ.ನ ಆಡಳಿತ ನಿರ್ದೇಶಕ ಕೃಷ್ಣ ಪೂಜಾರಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ (ನಿ) ಉಡುಪಿ ಇದರ ಅಧ್ಯಕ್ಷ ಪ್ರಸಾದ್ ರೈ , ನಿವೃತ್ತ ಮುಖ್ಯ ಶಿಕ್ಷಕ ಎಂ. ಹರಿದಾಸ್ ಹೆಗ್ಡೆ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಪೆರ್ಡೂರು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಮೊದಲಾದವರು ಉಪಸ್ಥಿತರಿದ್ದರು. ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಹಾಗೂ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ,ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.
ನಿತ್ಯಾನಂದ ಭಟ್, ಸೋನಿ ಪಿ ಶೆಟ್ಟಿ, ಪ್ರಸನ್ನ ಮುನಿಯಾಲು,ಸುಬ್ರಮಣ್ಯ ಕಂಗಿನಾಯ, ರಘುರಾಮ್ ಶೆಟ್ಟಿ, ಪ್ರವೀಣ್ ಸೂಡ, ಯಕ್ಷಗಾನ ಗುರು ಸುಬ್ರಮಣ್ಯ ಪ್ರಸಾದ್, ಉಪನ್ಯಾಸಕಿ ಅಕ್ಷತಾ, ಭರತನಾಟ್ಯ ಗುರು ಧನ್ಯ ವೇಣೂರು, ನೃತ್ಯ ಗುರು ಹರೀಶ್, ಕರಾಟೆ ಗುರು ಸೋಮನಾಥ ಸುವರ್ಣ, ಸಂಗೀತ ಶಿಕ್ಷಕಿ ಸವಿತಾ, ಚಾಣಕ್ಯ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪೋಷಕರು ಸಹಕರಿಸಿದರು.
ಆಧ್ಯಾ ಪುರಾಣಿ ಕಾರ್ಕಳ ಪ್ರಥಮ: ವಾಯ್ಸ್ ಆಪ್ ಚಾಣಕ್ಯ 2024 ರಾಜ್ಯ ಮಟ್ಟದ ಸಂಗೀತ ಸಮರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 12 ಜನ ಫೈನಲ್ ನಲ್ಲಿ ಭಾಗವಹಿಸಿದ್ದು 10ಸಾವಿರ ನಗದು, ಟ್ರೋಫಿ, ಪ್ರಮಾಣ ಪತ್ರ ದೊಂದಿಗೆ ಪ್ರಥಮ ಸ್ಥಾನವನ್ನು ಆದ್ಯ ಪುರಾಣಿಕ್ ಕಾರ್ಕಳ, 6ಸಾವಿರ ನಗದು, ಟ್ರೋಫಿ, ಪ್ರಮಾಣ ಪತ್ರ ದೊಂದಿಗೆ ದ್ವಿತೀಯ ಅನನ್ಯ ಮಂಗಳೂರು, 3ಸಾವಿರ ನಗದು, ಟ್ರೋಫಿ, ಪ್ರಮಾಣ ಪತ್ರ ದೊಂದಿಗೆತೃತೀಯ ಸುಧನ್ವ ತೀರ್ಥಹಳ್ಳಿ, ನಿಧಿ ಸುರೇಶ್ ತೀರ್ಥಹಳ್ಳಿ, ವರ್ಷಿಣಿ ಭಟ್ ತೀರ್ಥಹಳ್ಳಿ, ತುಷಾರ ಶಂಕರ್ ಶಿವಪುರ ಅವರು ತಲಾ ಒಂದು ಸಾವಿರದಂತೆ ನಗದು ಸಹಿತ ಪ್ರಮಾಣ ಪತ್ರ, ವೃದ್ಧಿ ಬ್ರಹ್ಮಾವರ, ಚೈತನ್ಯ ಶಿವಪುರ, ಸೌಜನ್ಯ ಪೆರ್ಡೂರು,ಪೂರ್ವಿ ಜಗನ್ನಾಥ್ ಕುಂದಾಪುರ, ಶ್ರೇಯ ಆರ್. ಭಟ್ ತೀರ್ಥಳ್ಳಿ, ರಂಜಿತ್ ಕಡ್ತಲ ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಜತೆ ಗಿಫ್ಟ್ ಹ್ಯಾಂಪರ್ ಪಡೆದುಕೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.