


ಕಾರ್ಕಳ: ಕಾರ್ಕಳ ಉತ್ಸವದಿಂದಾಗಿ ಕಲೆ,ಸಂಸ್ಕೃತಿಗೆ ಇನ್ನಷ್ಟು ಮೆರಗು ತಂದಿದೆ. ತುಳುನಾಡಿದ ಜನಪಥ ಕಲೆ ಯಕ್ಷರಂಗಾಯಣದ ಮೂಲಕ ಆರಂಭವಾದ ಕಾರ್ಕಳ ಉತ್ಸವವು ದಿನೇ ದಿನೇ ರಂಗುಕAಡಿತು. ಶನಿವಾರ ರಾತ್ರಿ ೯ ಗಂಟೆಯ ವರೆಗೆ ಎರಡುವರೆ ಲಕ್ಷ ಜನರು ಕಾರ್ಕಳ ಉತ್ಸವದಲ್ಲಿ ನೆರೆದಿದ್ದರು. ಅದೊಂದು ದೊಡ್ಡ ಸಾಹಸ ಕಾರ್ಯಕ್ರಮದಿಂದಾಗಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ ಎಂಬುವುದನ್ನು ಅರ್ಥೈಸಿಕೊಳ್ಳಬಹುದು. ತನ್ಮೂಲಕ ಕಾರ್ಕಳ ಮಂದಿ ಹೊಸ ವಿಚಾರಗಳನ್ನು ತೆರೆಸಿಕೊಂಡಿದೆ. ೩೭ ಸಮಿತಿಯಲ್ಲಿ ೧೫೦೦ ಸಾವಿರದಷ್ಟು ಸ್ವಯಂ ಸೇವಕರು ಇದಕ್ಕೆಲ್ಲ ಕಾರಣಕರ್ತರು. ಅವರ ಬಲ ಹಾಗೂ ಸ್ಪೂರ್ತಿ ಯಶಸ್ಸಿನ ಮೂಲವಾಗಿದೆ. ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೇ ಎಲ್ಲ ಸಮಿತಿಯವರು ಆಹೋರಾತ್ರಿ ದುಡಿದಿದ್ದಾರೆ ಅವರಿಗೆಲ್ಲರಿಗೂ ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಕೃತಜ್ಞತೆ ಸಲ್ಲಿಸಿದರು.
ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ ಕಾರ್ಕಳ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಂಗಳೂರು ಸಂಸದ ನಳೀನ್ ಕುಮಾರ್ ಮಾತನಾಡಿ, ಯಾವುದೇ ಖಾತೆ ಸಿಕ್ಕಿದ್ದರೂ ಅದನ್ನು ಸಮರ್ಪಕವಾಗಿ ನಿಬ್ಬಾಯಿಸುವ ಹೊಣೆಗಾರಿಕೆ ಸಚಿವ .ಸುನೀಲ್‌ಕುಮಾರ್ ಅವರಿಗೆ ಇದೆ ಎಂಬುವುದಕ್ಕೆ ಕಾರ್ಕಳ ಉತ್ಸವ ಉತ್ತಮ ನಿದರ್ಶನವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅಂತರರಾಷ್ಟಿçÃಯ ಕ್ರೀಡಾಪಟು ಮಮತಾ ಪೂಜಾರಿ ಹೆರ್ಮುಂಡೆ ಹಾಗು ಶಿಕ್ಷಕಿ ವಂದನಾ ರೈ ಬಳಗದವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವಾ , ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ , ಜಿಲ್ಲಾ ಪಂಚಾಯಿತಿನ ಕರ‍್ಯನಿರ್ವಾಹಣಾಧಿಕಾರಿ ನವೀನ್ ಭಟ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.