



ಕಾರ್ಕಳ 25 : ಮತದಾನವೆಂಬುದು ಬಹು ಪವಿತ್ರವಾದ ಕೆಲಸ. ಅದೊಂದು ಸಂವಿಧಾನ ಒದಗಿಸಿಕೊಟ್ಟ ವಿಶಿಷ್ಟವಾದ ಹಕ್ಕು. ದೇಶವನ್ನು ಆಳುವವರನ್ನು ಆರಿಸುವುದು ಸಾಮಾನ್ಯವಾದ ವಿಚಾರವಲ್ಲ. ಪ್ರತಿ ಆಯ್ಕೆಯ ಸಂದಭದಲ್ಲಿ ಎರಡೆರೆಡು ಬಾರಿ ಯೋಚಿಸಬೇಕು. ಹಾಗೆ ಯೋಚಿಸಿ ಮತದಾನ ಮಾಡುವಾಗ ಅತ್ತ್ಯುತ್ತಮರು ಆಯ್ಕೆಯಾಗುತ್ತಾರೆ.ದೇಶದ ಭವಿಷ್ಯತೆ ಮತ್ತು ಶ್ರೇಷ್ಟತೆಯನ್ನು ಕಾಪಾಡುವಲ್ಲಿ ನಾವು ಉತ್ತಮರನ್ನು ಆಯ್ಕೆ ಮಾಡಬೇಕು. ಯುವಜನತೆ ದೇಶದ ಸಮಗ್ರತೆ ಹಾಗೂ ಉತ್ತಮ ಬೆಳವಣಿಗೆಗಾಗಿ ಸದಾ ಇಂತಹ ಮುಖ್ಯ ಹಕ್ಕನ್ನು ಮರೆಯಬಾರದು ಮಾತ್ರವಲ್ಲ ತಪ್ಪದೆ ನಿಭಾಯಿಸಬೇಕು ಎಂಬುದಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶೆ, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯೆ ಚೇತನಾ ಎಸ್. ಎಫ್ ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಕಾನೂನು ಸೇವೆಗಳ ಸಮಿತಿ, ಕಾರ್ಕಳ ತಾಲೂಕು ಹಾಗೂ ಕಾಲೇಜಿನ ಎನ್. ಎಸ್. ಎಸ್. ಘಟಕ , ಮಾನವಿಕ ಸಂಘ, ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ತಹಶೀಲ್ದಾರರಾದ ಪುರಂದರ ಅವರು ಮಾತನಾಡಿ ಭಾರತದಲ್ಲಿ ಚುನಾವಣಾ ಆಯೋಗ ಈ ದಿನ ರಚನೆಯಾಯಿತು. ಅದರ ನೆನಪು ಹಾಗೂ ಮತದಾನದ ಶ್ರೇಷ್ಠತೆಯನ್ನು ಸಾರುವುದಕ್ಕಾಗಿ ಸರಕಾರದ ವತಿಯಿಂದ ಮತದಾನದ ದಿನಾಚರಣೆಯನ್ನು ಮಾಡಲಾಗುತ್ತದೆ ಎಂದರು..
ಅತಿಥಿಗಳಾಗಿ ಪಾಲ್ಗೊಂಡ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ , ತಾ.ಪಂ. ಇಒ ಗುರುದತ್, ಕಾರ್ಕಳ ಉಪವಿಭಾಗ ಪೋಲೀಸ್ ಉಪಾಧೀಕ್ಷಕ ವಿಜಯಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್,ಪುರಸಭೆಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಯವರು ಮತದಾನದಲ್ಲಿ ಯುವಕರ ಪಾತ್ರ ಮತ್ತು ಅದರ ತಿಳುವಳಿಕೆಯಿಂದಾಗಿ ದೇಶದ ಪ್ರಗತಿಪಥ ಮುನ್ನಡೆಯುವುದನ್ನು ವಿವರಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥರಾದ ಸುಚಿತ್ರಾ ಅವರು ಸ್ವಾಗತಿಸಿ, ಪ್ರಸ್ತಾವನೆಯ ಮಾತನ್ನಾಡಿದರು. ಸುಮಾಲಿನಿ ಜೈನ್ ಅವರು ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಅವರು ವಂದಿಸಿದರು. ಹೇಮಾವತಿ ಅವರು ಕಾರ್ಯಕ್ರಮ ನಿರೂಪಿಸಿದರು. ಆಶಿಕಾ ಚಿಪ್ಲೂಣ್ಕರ್ ಅವರು ಪ್ರಾರ್ಥಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.