



ಪರಿಸರವನ್ನು ದೇವರಂತೆ ಪೂಜಿಸಿದ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಇಂದು (ಡಿಸೆಂಬರ್ 16) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರು ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಹೀಗಾಗಿ ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮರಗಳ ಜೊತೆಗೆ ನಿತ್ಯ ಬದುಕುತ್ತಿದ್ದ, ಅವುಗಳನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ತುಳಸಿ ಗೌಡ. ನೆಟ್ಟು ಬೆಳೆಸಿದ ಗಿಡಗಳಿಗೆ ಲೆಕ್ಕವಿಲ್ಲ. ಇವರನ್ನು ನಡೆದಾಡುವ ಪರಿಸರ ಮಾತೆ ಎಂದು ಪರಿಸರ ಪ್ರಿಯರು ಪ್ರೀತಿಸುತ್ತಿದ್ದರು.ಮುನ್ನೂರಕ್ಕೂ ಹೆಚ್ಚಿನ ಮರಗಳ ಪರಿಚಯ ಇವರಿಗಿತ್ತು. ಪರಿಸರದ ಕುರಿತು ಅಪಾರ ಜ್ಞಾನವಿತ್ತು. ಪರಿಸರ ಅಧ್ಯಯನ ಮಾಡುವವರಿಗೂ, ಅರಣ್ಯಾಧಿಕಾರಿಗಳಿಗೂ ಇವರು ಜ್ಞಾನದ ಮೂಲವಾಗಿದ್ದರು. ಇದೀಗ ಇವರ ನಿಧನದಿಂದ ಪರಿಸರದ ನಿಜವಾದ ಹಸಿರ ಜೀವವೊಂದನ್ನು ನಾಡು ಕಳೆದುಕೊಂಡಂತಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.