



ಹೆಬ್ರಿ : ಬಾಗಿಲು ಮುರಿದು ಚಿನ್ನ ಹಾಗೂ ನಗದು ಕಳವು ಆದ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ನಡೆದಿದೆ . ಅ.18 ರಂದು ಮನೆಯ ಯಜಮಾನ ಉಮೇಶ್ ನಾಯ್ಕ ಎಂಬುವವರು ತನ್ನ ಸ್ನೇಹಿತ ದಿನೇಶ್ ರವರೊಂದಿಗೆ ರಾತ್ರಿ 9:30 ಗಂಟೆಗೆ ಮುನಿಯಲ್ ಬಾರ್ ಗೆ ಊಟ ಮಾಡಲು ಹೋಗಿ ವಾಪಾಸು ರಾತ್ರಿ 11:30 ಗಂಟೆಗೆ ವರಂಗದಲ್ಲಿರುವ ತನ್ನ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲಿನ ಮರದ ಚಿಲಕವನ್ನು ಮುರಿದು ಗ್ರೋಡೇಜ್ ಒಳಗಿದ್ದ ಸುಮಾರು 1,40,000 ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.