



ಕಾರ್ಕಳ: ಇಂದಿನ ಆಧುನಿಕ ಜೀವನಕ್ರಮದಲ್ಲಿ ವಿದ್ಯಾರ್ಥಿಗಳು ಜರೂರಾಗಿ ಗಮನ ಕೊಡಬೇಕಾದುದು ಅಂಕ ಗಳಿಸುವ ಕಡೆಗೆ ಮಾತ್ರವಲ್ಲ, ಬದಲು ಪಠ್ಯೇತರ ಚಟುವಟಿಕೆಗಳಿಗೆ ಕೂಡ ಎಂಬುದು ಬಹುಮುಖ್ಯ. ವೇದಿಕೆಭಯವನ್ನು ಕಳೆದು ವೇದಿಕೆ ಕುರಿತಾಗಿ ಉತ್ಸಾಹವನ್ನು ತಾಳಬೇಕು ಮಾತ್ರವಲ್ಲ ತಂಡವಾಗಿ ಕೆಲಸಮಾಡುವುದರ ಕಡೆಗೆ ಯೋಚಿಸುವಂತೆ ನಮ್ಮ ಮನೋಭೂಮಿಕೆಯನ್ನು ಬೆಳೆಸಿಕೊಳ್ಳಬೇಕು. ಎನ್.ಎಸ್.ಎಸ್ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಪರಿವರ್ತಿಸುತ್ತದೆ. ಎಂಬುದಾಗಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ್.ಎ.ಕೋಟ್ಯಾನ್ ಅವರು ಹೇಳಿದರು. ಅವರು ಸರಕಾರಿ ಹಿ.ಪ್ರಾ. ಶಾಲೆ, ಕಲ್ಲಗುಪ್ಪೆ, ಜೋಡುಕಟ್ಟೆಯಲ್ಲಿ ನಡೆಯುತ್ತಿರುವ ಶ್ರೀಭುವನೇಂದ್ರಕಾಲೇಜಿನ ಎನ್.ಎಸ್.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಿಬಿರವನ್ನು ಉದ್ಘಾಟಿಸಿದ ಮಿಯ್ಯಾರು ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ರೇವತಿ ನಾಯ್ಕ ಅವರು ಎಲ್ಲರನ್ನು ಅರಿತು, ಬೆರೆತು ಬಾಳಿ ಒಳ್ಳೆಯ ಪ್ರಜೆಗಳಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ನಿವೃತ್ತ ವಿಜ್ಞಾನಿ ಡಾ. ಜನಾರ್ದನ ಇಡ್ಯಾ ಅವರು ಮಾತನಾಡಿ ಹೊಂದಾಣಿಕೆ ಎಂಬುದು ಜೀವನದ ಬಹುಮುಖ್ಯ ಆಧಾರಸ್ತಂಭ. ಎನ್.ಎಸ್.ಎಸ್‌ನ ಅನುಭವದೊಂದಿಗೆ ಸಮಾಜಸೇವೆಯ ಮಹತ್ವವನ್ನು ಅರಿತು ನಮ್ಮನ್ನು ಬೆಳಗಿಕೊಳ್ಳಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಂದಕಿಶೋರ್, ಕಲ್ಲಗುಪ್ಪೆ ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ವಿಜಯ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತ ಹೆಗ್ಡೆ, ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಮತಿ ಸುಚಿತ್ರಾ, ಶಖರ್ ಕುಡ್ವ, ಗೀತಾ, ಪ್ರಜ್ಞಾಕುಮಾರಿ ಹಾಗೂ ವಿದ್ಯಾರ್ಥಿ ನಾಯಕುರುಗಳಾದ ನಿರ್ಮಿತಾ ಕಿಣಿ, ರಕ್ಷಿತ್ ಆರ್, ಸಹನ ಪೂಜಾರಿ ಉಪಸ್ಥಿತರಿದ್ದರು. ಸುಚಿತ್ರಾ ಅವರು ಸ್ವಾಗತಿಸಿ, ಪ್ರಜ್ಞಾ ಅವರು ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.