



ಕಾರ್ಕಳ : ನಮ್ಮ ವ್ಯಕ್ತಿತ್ವದ ರಚನೆ ಬಹುವಿಧಗಳಿಂದಾಗುತ್ತದೆ. ದೇಶವನ್ನು ಕಟ್ಟುವ ಮತ್ತು ಉಳಿಸಿಕೊಳ್ಳುವ ಜವಾಬ್ದಾರಿ ಇಂದಿನ ಯುವಕರಲ್ಲಿದೆ. ನಮ್ಮ ವ್ಯಕ್ತಿತ್ವವನ್ನು ನಾಶಮಾಡುವ ಮಾದಕದ್ರವ್ಯಗಳ ಬಗ್ಗೆ ಸದಾ ನಾವು ಜಾಗ್ರತೆಯನ್ನು ಹೊಂದಿರಬೇಕು. ಬರೇ ಎಚ್ಚರವಿದ್ದರೆ ಸಾಲದು ಸುತ್ತಮುತ್ತ ಅದರ ಮಾಹಿತಿ ಸಿಕ್ಕಿದ ತಕ್ಷಣ ಸಂಬಂಧಿತರಿಗೆ ತಿಳಿಸಿದರೆ ಆ ಜಾಲವನ್ನೇ ನಿಲ್ಲಿಸಲು ಅನುಕೂಲವಾಗುತ್ತದೆ.
ವಿದ್ಯಾರ್ಥಿಗಳು ಜೀವನದಲ್ಲಿ ಓದು , ಹೆಚ್ಚಿನ ಅಧ್ಯಯನದ ಕಡೆಗೆ ಗಮನ ನೀಡಿದರೆ ಇವುಗಳೆಲ್ಲ ಹತ್ತಿರ ಸುಳಿಯಲಾರವು ಎಂಬುದಾಗಿ ಶ್ರೀಮತಿ ಶುಭಾ , ನ್ಯಾಯವಾದಿಗಳು ಕಾರ್ಕಳ ಇವರು ಹೇಳಿದರು. ಅವರು ಕಾರ್ಕಳ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಕಳ ವತಿಯಿಂದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಮಾದಕದ್ರವ್ಯ ನಿರ್ಮೂಲನೆ ಜಾಗೃತಿಯ ಮಾಹಿತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ಅವರು ಮಾತನಾಡುತ್ತಾ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆದಾಗ ಯುವಶಕ್ತಿ ಬದಲಾಗಿ ದೇಶದ ಆಸ್ತಿಯಾಗುವುದರಲ್ಲಿ ಸಂಶಯವಿಲ್ಲವೆಂದರು.
ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರೂ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೋಮಲ ಆರ್.ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾನೂನಿನ ಮೂಲಕ ಶಿಸ್ತನ್ನು ತರುವುದಕ್ಕಿಂತ ತಾವೇ ಅರಿತು ದುಶ್ಚಟಗಳನ್ನು ದೂರಮಾಡುವುದು ಹೆಚ್ಚು ಅಪೇಕ್ಷಣಯವೆಂದರು.
ಮಾರಂಭದಲ್ಲಿ ಕಾರ್ಕಳದ ಎರಡನೇ ಹೆಚ್ಚುವರಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಢಾಧಿಕಾರಿಗಳಾದ ಅಬು ತಾಹಿರ್ ಅವರು ಭಾಗವಹಿಸಿ ನಮ್ಮ ಭವಿಷ್ಯದ ಕನಸುಗಳ ಬಗ್ಗೆ ವಿದ್ಯಾರ್ಥಿಗಳು ಸದಾ ಯೋಚನೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಅರ್ಹತೆಗಳನ್ನು ಒರೆಗೆ ಹಚ್ಚಿ ದೇಶಕ್ಕೆ ಸಂಪತ್ತಾಗಬೇಕು ಎಂದರು.
ಇನ್ನೋರ್ವ ಅತಿಥಿ ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ಸದಾ ಶಿಸ್ತು, ಸಂಯಮಗಳ ಕಡೆಗೆ ಗಮನ ಕೊಡುವುದು ಅಗತ್ಯ. ಅದರಿಂದಾಗಿ ಸಾಧನೆಗೆ ಅನುಕೂಲವಾಗುತ್ತದೆ ಎಂದರು.
ಕಾಲೇಜಿನವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಮಾದಕದ್ರವ್ಯಗಳಿಂದಾಗುವ ಕೆಡುಕಿನ ಕುರಿತು ಮಾಹಿತಿಗಳನ್ನು ನೀಡಿದರು. ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ ನಾಗಭೂಷಣ್ ಸ್ವಾಗತಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವನಿತಾ ಶೆಟ್ಟಿಯವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.