



ಗುರುಗ್ರಾಮ್: ಚಲಿಸುತ್ತಿರುವ ಕಾರಿನಿಂದ ನೋಟುಗಳನ್ನು ಎಸೆದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಬಂಧಿತ ಆರೋಪಿಗಳು. ಮಾರ್ಚ್ 2 ರಂದು ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದ್ದು,ಅಪಾಯಕಾರಿಯಾಗಿ ಕಾರು ಚಲಾಯಿಸುತ್ತಾ, ಹಿಂಬದಿಯಿಂದ ನೋಟುಗಳನ್ನು ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ದೃಶ್ಯ ಹಿಂದಿಯಲ್ಲಿ ಇತ್ತೀಚೆಗೆ ಬಂದಿರುವ ಶಾಹಿದ್ ಕಪೂರ್, ಕೆಕೆ ಮೆನನ್ ಅಭಿನಯದ ʼಫರ್ಜಿʼ ವೆಬ್ ಸಿರೀಸ್ ನ ರೀ ಕ್ರಿಯೆಕ್ಷನ್ ದೃಶ್ಯವಾಗಿನ್ನಾಗಿ ಮಾಡಿ, ಅದನ್ನು ರೀಲ್ಸ್ ಮಾಡಲಾಗಿತ್ತು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಅದನ್ನು ಡಿಲೇಟ್ ಮಾಡಲಾಗಿತ್ತು. ಆದರೆ ಪೊಲೀಸರು ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ದಿಲ್ಲಿ ಮೂಲದ ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ನನ್ನು ಬಂಧಿಸಿದ್ದಾರೆ.
ಆರೋಪಿಗಳು ವೆಬ್ ಸಿರೀಸ್ ವೊಂದರ ದೃಶ್ಯವನ್ನು ರೀ ಕ್ರಿಯೇಟ್ ಮಾಡಲು ಹೋಗಿದ್ದರು. ಇದೊಂದು ನಟನೆ ಮಾತ್ರ, ಅವರು ಅಲ್ಲಿ ಬಳಸಿದ ನೋಟ್ ಗಳು ನಕಲಿ. ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.