



ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ಆ ಪ್ರಯುಕ್ತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿ.ಸುನಿಲ್ ಕುಮಾರ್ ಕಣಕ್ಕೆ ಇಳಿದಿದ್ದಾರೆ. ವಿ.ಸುನಿಲ್ ಕುಮಾರ್ ಬಗ್ಗೆ ಜನರ ಅಭಿಮತ ಹೀಗಿವೆ.
ಸುನೀಲ್ ಕುಮಾರ್ ಅಭಿವೃದ್ಧಿ ಗೆ ಹೊಸ ಭಾಷ್ಯ ಬರೆದಿದ್ದಾರೆ. -ಜಯರಾಂ ಪ್ರಭು, ಕಡಾರಿ
ರಸ್ತೆ ಹಾಗೂ ಸೇತುವೆಗಳು ಅಭಿವೃದ್ಧಿ ಯೋಜನೆ ಗಳನ್ನು ಮಾಡಿದ್ದಾರೆ. -ಸದಾಶಿವ ಆಚಾರ್ಯ, ಮಾಳ
ಕಾರ್ಕಳವನ್ನೆ ಬ್ರಾಂಡ್ ಮಾಡುವ ಮೂಲಕ ಬಿಳಿಬೆಂಡೆ ಕಾರ್ಲಕಜೆ ಅಕ್ಕಿಗೆ ಜಾಗತಿಕ ಮನ್ನಣೆ ನೀಡಿದ್ದಾರೆ. -ದೀಪಕ್ ಶೆಟ್ಟಿ, ಗುಡ್ಡೆಯಂಗಡಿ
35 ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಇದ್ದ ನನ್ನ ಕುಟುಂಬಕ್ಕೆ ಸುನೀಲ್ ಕುಮಾರ್ ಹಕ್ಕು ಪತ್ರ ವಿತರಿಸಿ ಸರಕಾರದ ಸೌಲಭ್ಯಗಳನ್ನು ವಿತರಿಸಿದ್ದಾರೆ. -ಪೂವಪ್ಪ ಶೆಟ್ಟಿ, ಚಾರ
ಕಾರ್ಕಳ ಉತ್ಸವ ಹಾಗೂ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಪ್ರವಾಸೋದ್ಯಮ ಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. -ಪ್ರೇಮ ಕುಮಾರಿ
ಕಾರ್ಕಳ ತಾಲೂಕಿನ ಸಮಗ್ರ ಅಭಿವೃದ್ಧಿಯೇ ಸುನೀಲ್ ಕುಮಾರ್ ಅವರಿಗೆ ಶ್ರೀ ರಕ್ಷೆಯಾಗಿದೆ. -ವಿಘ್ನೇಶ್, ಹಿರ್ಗಾನ
ಕಲಾಮೇಳಗಳ ಅಪೂರ್ವ ಸಂಗಮವಾಗಿತ್ತು ಕಾರ್ಕಳ ಉತ್ಸವ. ಅಂತಹ ಉತ್ಸವಗಳು ಪ್ರತಿವರ್ಷವೂ ನಡೆಯಲಿ. -ಪ್ರಿಯಾ, ಹೆಬ್ರಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.