logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಜನತೆ ಹೋಟೆಲ್ ಗಳಲ್ಲಿ ಏನು ಮಾಡಲು ಬಯಸುತ್ತಾರೆ ? ಪ್ರಖ್ಯಾತ ಸಂಸ್ಥೆ IHG Hotels & Resorts ಸರ್ವೇಯಲ್ಲಿ ಏನು ಹೇಳಿದೆ ಇಲ್ಲಿ ನೋಡಿ

ಟ್ರೆಂಡಿಂಗ್
share whatsappshare facebookshare telegram
8 Nov 2022
post image

ಬೆಂಗಳೂರು:

  • ಕರ್ನಾಟಕದಲ್ಲಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 93ರಷ್ಟು ಜನರು ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಏಕಾಂತವನ್ನು ಬಯಸುವುದಾಗಿ ತಿಳಿಸಿದ್ದಾರೆ
  • ಹೋಟೆಲ್ ಅನುಭವದಲ್ಲಿ, ಕೊಠಡಿ ಸೇವೆ (60%), ಸ್ವಾದಿಷ್ಟ ಆಹಾರ (58%) ಮತ್ತು ಈಜುಕೊಳ, ಸೌನಾದಂತಹ ಸೌಲಭ್ಯಗಳನ್ನು (57%) ಅತಿಥಿಗಳು ಅನ್ವೇಷಿಸುತ್ತಾರೆ
  • ಪ್ರತಿಕ್ರಿಯಿಸಿದ ಕರ್ನಾಟಕದ ಜನರು ಹೋಟೆಲ್‌ಗಳಲ್ಲಿ ಹೆಚ್ಚು ವೈಯಕ್ತೀಕರಿಸಿದ ಅನುಭವಕ್ಕೆ ಆದ್ಯತೆ ನೀಡಿದ್ದಾರೆ

"ಗೆಸ್ಟ್ ಹೌ ಯು ಗೆಸ್ಟ್" ಜಾಗತಿಕ ನಿಷ್ಠೆ ಅಭಿಯಾನದ ಭಾಗವಾಗಿ IHG Hotels & Resorts ನಿಯೋಜಿಸಿದ ಅಖಿಲ-ಭಾರತ ಮಟ್ಟದ ಸಮೀಕ್ಷೆಯು, ಹೋಟೆಲ್‌ನ ಅತಿಥಿಯಾಗಿ ಗ್ರಾಹಕರು ತಮ್ಮ ಸಮಯವನ್ನು ಹೇಗೆ ಆನಂದಿಸಲು ಬಯಸುತ್ತಾರೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಳನೋಟವುಳ್ಳ ಫಲಿತಾಂಶಗಳನ್ನು ಬಹಿರಂಗಪಡಿಸಿದೆ. ಸಮೀಕ್ಷೆಯು ಕರ್ನಾಟಕ ಸಹಿತ ಭಾರತದ 28 ರಾಜ್ಯಗಳಲ್ಲಿ ಅತಿಥಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ.

ಸಮೀಕ್ಷೆಯ ಮಾದರಿ ಗಾತ್ರದಲ್ಲಿ 18 - 65 ವಯೋಮಾನದ ಪುರುಷರು (57%) ಮತ್ತು ಮಹಿಳೆಯರು (43%) ಸೇರಿದಂತೆ ಒಟ್ಟು 372 ಪ್ರತಿಸ್ಪಂದಕರು ಪಾಲ್ಗೊಂಡಿದ್ದರು. ಹೋಟೆಲ್‌ಗಳಲ್ಲಿ ತಂಗುವ ಸಮಯದಲ್ಲಿ ಅತಿಥಿಗಳ ಆದ್ಯತೆಗಳು ಮತ್ತು ಆಸೆಗಳೇನೆಂಬುದನ್ನು ಅನ್ವೇಷಿಸುವ ಗುರಿಯನ್ನು ಹೊಂದಿದ್ದ ಸಮೀಕ್ಷೆಯು ವಿಶ್ವ ದರ್ಜೆಯ ಆತಿಥ್ಯದ ಅನುಭವವನ್ನು ನೀಡುವಲ್ಲಿ ನಿರ್ಣಾಯಕವಾಗಿದೆ. ಹೋಟೆಲ್ ಅತಿಥಿಗಳು ಹೆಚ್ಚು ವೈಯಕ್ತಿಕಗೊಳಿಸಿದ ಅನುಭವವನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು ಇದು ಬಹಿರಂಗಪಡಿಸಿತು. ಜೊತೆಗೆ, ಅತಿಥಿಗಳು ಸಂಪೂರ್ಣವಾಗಿ ಏಕಾಂತದಲ್ಲಿರಲು ಅನುವು ಮಾಡಿಕೊಡಲು ಹೋಟೆಲ್ ಸಮೂಹವು ಆಶಿಸುತ್ತದೆ.

ಹೋಟೆಲ್‌ಗಳಲ್ಲಿ ತಂಗುವಾಗ ಅತಿಥಿಗಳು ಏನನ್ನು ಅನ್ವೇಷಿಸುತ್ತಾರೆ ಎಂಬುದನ್ನು ಸಮೀಕ್ಷೆಯ ಫಲಿತಾಂಶಗಳು ಬಹಿರಂಗಪಡಿಸಿವೆ ಮತ್ತು ಮೂರು ಜನಪ್ರಿಯ ವೈಶಿಷ್ಟ್ಯಗಳನ್ನು ರೇಟ್ ಮಾಡಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ 60% ಜನರು ಹೋಟೆಲ್‌ಗಳಲ್ಲಿ ಕೊಠಡಿ ಸೇವೆಗಳನ್ನು ಬಯಸುತ್ತಾರೆ, 58% ಅತಿಥಿಗಳು ಇಲ್ಲಿ ಲಭ್ಯವಿರುವ ಆಹಾರದ ಆಯ್ಕೆಗಳನ್ನು ಇಷ್ಟಪಡುತ್ತಾರೆ. 57% ಅತಿಥಿಗಳು ಇಲ್ಲಿರುವ ರೆಸ್ಟೋರೆಂಟ್‍‌ಗಳು, ಈಜುಕೊಳ ಮತ್ತು ಸೌನಾದಂತಹ ಸೌಲಭ್ಯಗಳನ್ನು ಆನಂದಿಸುತ್ತಾರೆ. ಈ ನಡುವೆ, ತೃಪ್ತಿದಾಯಕ ವಾಸ್ತವ್ಯಕ್ಕಾಗಿ ಹೋಟೆಲ್‌ಗಳ ಕೊಠಡಿಗಳಲ್ಲಿ ಲಭ್ಯವಿರುವ ಮನೋರಂಜನೆಯನ್ನು ಆನಂದಿಸುವುದಾಗಿ 42% ಅತಿಥಿಗಳು ಪ್ರತಿಕ್ರಿಯಿಸಿದ್ದಾರೆ.

ಭಾರತೀಯರು ಹೋಟೆಲ್‌ಗಳಲ್ಲಿ ಅತಿಥಿಗಳನ್ನು ಯಾವ ಸೌಲಭ್ಯಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮತ್ತಷ್ಟು ಅನ್ವೇಷಿಸಿದಾಗ, 32% ಜನರು ಬೀಚ್‌ ಉಡುಗೆಯಲ್ಲಿ ಹೋಟೆಲ್‌ನಲ್ಲಿ ಸುತ್ತಾಡಲು ಬಯಸುತ್ತಾರೆ ಎಂದು ಗೊತ್ತಾಗಿದೆ. 22% ಜನರು ರಾತ್ರಿ ಊಟದ ವೇಳೆ ತಮ್ಮ ಉಡುಪುಗಳನ್ನು ಬದಲಾಯಿಸಿ, ಆಕರ್ಷಕವಾಗಿ ಕಾಣಲು ಬಯಸುತ್ತಾರೆ, ಆದರೆ ಇನ್ನೂ 22% ಜನರು ಪೈಜಾಮಾ ಮತ್ತು ಹೋಟೆಲ್ ಸ್ಲಿಪ್ಪರ್‌ಗಳು ತಮಗೆ ಹೆಚ್ಚು ಆರಾಮದಾಯಕವಾಗಿರುತ್ತವೆ ಎಂದಿದ್ದಾರೆ. ಪ್ರತಿಸ್ಪಂದಕರಲ್ಲಿ 16% ಜನರು ತಮಗಾಗಿ ಅಡುಗೆ ಮಾಡುವ, ಆಮೇಲೆ ಸ್ವಚ್ಛಗೊಳಿಸುವ ಜಂಜಾಟವಿಲ್ಲ, ಇದು ಹೋಟೆಲ್ ವಾಸ್ತವ್ಯದ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಹೇಳಿದ್ದಾರೆ.

ಸಮೀಕ್ಷೆಯ ಪ್ರಮುಖ ಅಂಶವೆಂದರೆ, ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವಾಗ ಪೂರ್ಣ ಏಕಾಂತ ಲಭಿಸುವುದಾಗಿ 93% ಅತಿಥಿಗಳು ಭಾವಿಸುತ್ತಾರೆ. 64% ಜನರು ತಮ್ಮ ವಾಸ್ತವ್ಯದ ಸಮಯದಲ್ಲಿ ಆರಾಮವಾಗಿರುವುದಾಗಿ ಭಾವಿಸಿದರೆ, 38% ಜನರು ಹೋಟೆಲ್‌ನಲ್ಲಿ ತಂಗುವ ಸಮಯದಲ್ಲಿ ತಮ್ಮ ಮನೆಯಲ್ಲೇ ಇರುವಂತೆ ಭಾವಿಸುತ್ತಿರುವುದಾಗಿ ಹೇಳಿದ್ದಾರೆ. ಇನ್ನು 11% ಜನರು ತಮ್ಮ ಮಕ್ಕಳು ಅನುಚಿತವಾಗಿ ವರ್ತಿಸಿ, ಇತರ ಅತಿಥಿಗಳಿಗೆ ತೊಂದರೆ ಉಂಟುಮಾಡಬಹುದು ಎಂದು ಚಿಂತಿಸುತ್ತಾರೆ.

ಒಳನೋಟವುಳ್ಳ ಸಮೀಕ್ಷೆಯು ವೈಯಕ್ತಿಕಗೊಳಿಸಿದ ಹೋಟೆಲ್ ಅನುಭವದ (86%) ಜನಪ್ರಿಯತೆಯನ್ನು ಬಹಿರಂಗಪಡಿಸಿದೆ, ಇದನ್ನು IHG Hotels & Resorts ತನ್ನ 'ಗೆಸ್ಟ್ ಹೌ ಯು ಗೆಸ್ಟ್' ಅಭಿಯಾನದೊಂದಿಗೆ ಸಂಭ್ರಮಿಸಲು ಬಯಸುತ್ತಿದೆ. ವಿನೂತನವಾಗಿ ಆರಂಭಿಸಲಾದ IHG One Rewards ಕಾರ್ಯಕ್ರಮದ ಸದಸ್ಯರಿಗೆ ಅನನ್ಯ ಮತ್ತು ವೈಯಕ್ತಿಕಗೊಳಿಸಿದ ಆತಿಥ್ಯದ ಪ್ರಯೋಜನಗಳನ್ನು ಈ ಜಾಗತಿಕ ಉಪಕ್ರಮವು ವಿಶದೀಕರಿಸುತ್ತದೆ. ಆತಿಥ್ಯ ವಲಯದಲ್ಲಿ ವಿಶಿಷ್ಟವಾಗಿರುವ ಈ ಕಾರ್ಯಕ್ರಮವು ಅತಿಥಿಗಳಿಗಾಗಿ ಹಾಲಿ ನೀಡುತ್ತಿರುವ ಸೌಲಭ್ಯಗಳೊಂದಿಗೆ, ತನ್ನ ಸದಸ್ಯರಿಗೆ ತಮ್ಮ ವಾಸ್ತವ್ಯದ ಅನುಭವವನ್ನು ಹೆಚ್ಚಿಸಲು ಉದ್ಯಮ-ಪ್ರಮುಖ ಮೌಲ್ಯ ಮತ್ತು ಸಂಬಂಧಿತ ಪ್ರಯೋಜನಗಳನ್ನು ಒದಗಿಸುತ್ತದೆ.

ಸಂಶೋಧನೆಯ ಭಾಗವಾಗಿ IHG ಯು 'ಹೋಟೆಲ್ ಅತಿಥಿ ಆರ್ಕಿಟೈಪ್ಸ್' ಸರಣಿಯನ್ನೂ ರಚಿಸಿತು. ಇವರಲ್ಲಿ, 33% ಜನರು "ಸ್ಮರಣೆಗಳ-ನಿರ್ಮಾತೃಗಳು" ಆಗಿದ್ದು, ಸ್ಮರಣೀಯ ಅನುಭವಗಳನ್ನು ರಚಿಸುವ ಮತ್ತು ಸ್ಥಳೀಯವಾಗಿ ಪ್ರವಾಸ ಮಾಡುವಲ್ಲಿ ಆಸಕ್ತರಾಗಿರುತ್ತಾರೆ. 23% ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಶ್ರಾಂತಿ ಮತ್ತು ಸಂತೋಷವನ್ನು ಅನುಭವಿಸಲು ತಮ್ಮನ್ನು "ಗ್ರೂಪಿ" ಎಂದು ವರ್ಗೀಕರಿಸಿಕೊಳ್ಳುತ್ತಾರೆ. 15% ಜನರು "ಅನ್ವೇಷಕರು", ಬೀಟ್ ಟ್ರ್ಯಾಕ್‌ನಿಂದ ದೂರ ಹೋಗಿ ಹೊಸ ಅನುಭವಗಳನ್ನು ಅನ್ವೇಷಿಸುತ್ತಾರೆ.ತಾವು "ಪಾರ್ಟಿ ಪ್ರಿಯರು" ಎಂದು 13% ಜನರು ಒಪ್ಪಿಕೊಂಡರು. ಹಗಲಲ್ಲಿ ಈಜುಕೊಳದಲ್ಲಿ ವಿಹರಿಸುವ ಅವರು, ರಾತ್ರಿ ವೇಳೆ ಪಾನೀಯ ಗೋಷ್ಠಿಗಳಿಗೆ ಹಾಜರಾಗುತ್ತಾರೆ. ಅಂತಿಮವಾಗಿ, 13% ಜನರು "ಪ್ರಣಯಿಗಳು-ಪ್ರೇಮಿಗಳು", ತಮ್ಮ ಸಂಗಾತಿಗಳೊಂದಿಗೆ ಪ್ರಣಯದ ಐಷಾರಾಮಿ ಪ್ರವಾಸಗಳನ್ನು ಆನಂದಿಸುತ್ತಾರೆ.

IHG Hotels & Resorts ನ ನೈರುತ್ಯ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಜೈನ್ ಪ್ರತಿಕ್ರಿಯಿಸಿ, “ಭಾರತದಲ್ಲಿ ಆತಿಥ್ಯ ಉದ್ಯಮವು ಅತ್ಯಂತ ವೇಗವಾಗಿ ವಿಕಸನಗೊಳ್ಳುತ್ತಿದೆ. ವ್ಯಾಪಾರ ಮತ್ತು ವಿರಾಮದ ವಿಭಾಗಗಳಲ್ಲಿ ಅತಿಥಿಗಳ ವೈವಿಧ್ಯಮಯ ಆದ್ಯತೆಗಳನ್ನು ಪೂರೈಸುತ್ತಿದೆ. ಎಲ್ಲ ಸೇವೆಗಳ ಕೇಂದ್ರ ಬಿಂದು ಅತಿಥಿಗಳೇ ಆಗಿರುತ್ತಾರೆ. ಅವರು ಅನ್ವೇಷಣೆಯನ್ನು ತೃಪ್ತಿಪಡಿಸುವುದಕ್ಕಾಗಿ ಅವರ ಆಗತ್ಯಗಳು, ಆಸೆಗಳು ಮತ್ತು ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಅತ್ಯಗತ್ಯವಾಗಿರುತ್ತದೆ. ಹೋಟೆಲ್‌ಗಳಲ್ಲಿ ವೈಯಕ್ತಿಕಗೊಳಿಸಿದ ಸೇವೆಗಳನ್ನು ಅತಿಥಿಗಳು ಹೆಚ್ಚು ಗೌರವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಾಕಷ್ಟು ಒಳನೋಟವನ್ನು ಹೊಂದಿದೆ. ಪುನರಾವರ್ತಿತ ಗ್ರಾಹಕರನ್ನು ಆಕರ್ಷಿಸಲು, ಅವರಿಗೆ ಉತ್ಕೃಷ್ಟ ಮಟ್ಟದ ಸೇವೆಗಳನ್ನು ಒದಗಿಸುವ ಗುರಿಯನ್ನು IHG ಹೊಂದಿದೆ. ನಮ್ಮ ಪ್ರತಿಯೊಬ್ಬ ಅತಿಥಿಯೂ ಅನನ್ಯವಾಗಿರುತ್ತಾರೆ ಎಂಬ ಅರಿವು ನಮಗಿದೆ. ಪುನಶ್ಚೇತನಗೊಂಡ ನಮ್ಮ ನಿಷ್ಠಾ ಕಾರ್ಯಕ್ರಮವಾಗಿರುವ IHG One Rewards ನ ಸದಸ್ಯರು ತಮ್ಮ ಪಾಯಿಂಟ್ಸ್ ಅನ್ನು ಅವರಿಗೆ ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬಹುದು.

IHG One Rewards ಪ್ರಯೋಜನಗಳು ಬೋನಸ್ ಪಾಯಿಂಟ್‌ಗಳನ್ನು ತ್ವರಿತವಾಗಿ ಗಳಿಸುವ ರಚನೆಯನ್ನು ಒಳಗೊಂಡಿವೆ. ಈ ಮೂಲಕ ಸದಸ್ಯರು ಇನ್ನೂ ಹೆಚ್ಚಿನ ಅಂಕಗಳನ್ನು ಮತ್ತು ಬ್ಯಾಗ್ ರಿವಾರ್ಡ್‌ಗಳನ್ನು ಬೇಗನೆ ಪಡೆಯಬಹುದು. ಡೈಮಂಡ್ ಎಲೈಟ್ ಸದಸ್ಯರಿಗೆ ಉಚಿತ ಉಪಾಹಾರ, ರಿವಾರ್ಡ್ ನೈಟ್ ಡಿಸ್ಕೌಂಟ್ ಪ್ರಚಾರಗಳಿಗೆ ವಿಶೇಷ ಪ್ರವೇಶ, ಕೊಠಡಿ ಅಪ್ಡೇಟ್‌ಗಳು, ಆರಂಭಿಕ ಚೆಕ್-ಇನ್ ಅಥವಾ ಚೆಕ್‌ಔಟ್ ಮುಂತಾದ ಪ್ರಯೋಜನಗಳು (ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು) ಇರುತ್ತವೆ.

IHG Hotels & Resorts ಇಂಡಿಗೋ, ವೋಕೋ, ಕ್ರೌನ್ ಪ್ಲಾಜಾ, ಇಂಟರ್‌ಕಾಂಟಿನೆಂಟಲ್, ಹಾಲಿಡೇ ಇನ್ ಮತ್ತು ಕಿಂಪ್ಟನ್ ಮುಂತಾದ ತನ್ನ ಬ್ರ್ಯಾಂಡ್‌ಗಳ ಮೂಲಕ ಅತಿಥಿಗಳ ಬದಲಾಗುತ್ತಿರುವ ಆಸೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸಲು ತನ್ನ One Rewards ಕಾರ್ಯಕ್ರಮವನ್ನು ನಿರಂತರವಾಗಿ ಸುಧಾರಿಸುತ್ತಿದೆ. IHG ಯ 'ಗೆಸ್ಟ್ ಹೌ ಯು ಗೆಸ್ಟ್' ಅಭಿಯಾನವು One Rewards ಸದಸ್ಯರಿಗೆ ಆಯ್ದ ಹೋಟೆಲ್‌ಗಳಲ್ಲಿ (ಸೀಮಿತ ಅವಧಿಯವರೆಗೆ) ಸೆಲೆಬ್ರಿಟಿಗಳನ್ನು ಭೇಟಿಯಂತಹ ಅವಕಾಶಗಳೊಂದಿಗೆ ವಿಶೇಷವಾದ ಸೆಲೆಬ್ರಿಟಿ ಹೋಟೆಲ್ ಅನುಭವಗಳನ್ನು ಒದಗಿಸುತ್ತದೆ.

IHG One Rewards ಪ್ರೋಗ್ರಾಂ ಮತ್ತು ಅದರ ಪ್ರಯೋಜನಗಳನ್ನು ಪಡೆಯುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಭೇಟಿ ನೀಡಿ: ihg.com/one

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.