


ಕಾರ್ಕಳ: ಕಾರ್ಕಳ ಪುರಸಭೆಯ ಅಧೀನದಲ್ಲಿ ಇರುವ ಪುರಸಭೆಯ ವ್ಯಾಪ್ತಿಯ ಮುಂಡ್ಲಿ ಡ್ಯಾಂ ಗೇಟ್ ಕಳವು ಪ್ರಕರಣ ಏನಾಯ್ತು ? ೧೨೫ ಕೆ.ಜಿ ಭಾರದ ೨೨೦ ಕಬ್ಬಣದ ಗೇಟ್ ಕಳವು ಆಗಿ ಮೂರು ತಿಂಗಳು ಕಳೆದಿದ್ದು ಇನ್ನೂ ಅದರ ಮಾಹಿತಿ ಬಂದಿಲ್ಲ .ಎಂದು ಪ್ರತಿಪಕ್ಷ ನಾಯಕ ಅಶ್ಪಕ್ ಅಹ್ಮದ್ ಹೇಳಿದರು ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದರು. ಕರ್ನಾಟಕ ಪೊಲೀಸ್ ಇಲಾಖೆಯು ಅದೆಷ್ಟೋ ನಿಗೂಢ ರಹಸ್ಯಗಳನ್ನು ಬಯಲಿಗೆಳೆದಿದೆ.ಇನ್ನೂ ಪ್ರಕರಣ ಬೇಧಿಸದಿರುವುದು ಖೇದಕರ ಎಂದರು ೧೨ ವರ್ಷಗಳಿಂದ ಪುರಸಭಾ ವಿದ್ಯುತ್ ಹಾಗೂ ನೀರಿನ ಸರಬರಾಜು ವಿಭಾಗಗಳಲ್ಲಿ ನಿರುಪಯುಕ್ತವಾದ ಬೆಲೆಬಾಳುವ ವಸ್ತುಗಳ ಕುರಿತು ವಿವರಗಳನ್ನು ಸಾಮಾನ್ಯ ಸಭೆಯಲ್ಲಿ ನೀಡಲು ಪುರಸಭಾ ಆಡಳಿತ ವಿಫಲಗೊಂಡಿದೆ. ಸುಮಾರು ರೂ.೫೦ ಲಕ್ಷ ಸೊತ್ತುಗಳ ವಿವರ ನೀಡಿ ಎಂದು ಅಶ್ಪಕ್ ಅಹಮ್ಮದ್ ಒತ್ತಾಯಿಸಿದರು.
ನಿರ್ಮಲ ಯೋಜನೆಯಡಿಯಲ್ಲಿ ಕಾರ್ಕಳ ಪುರಸಭಾ ತ್ಯಾಜ್ಯ ನಿರ್ವಹಣಾ ಘಟಕದ ಅಭಿವೃದ್ಧಿಗಾಗಿ ರೂ.೧ ಕೋಟಿ ಅನುದಾನವನ್ನು ಪುರಸಭಾ ಅಧ್ಯಕ್ಷರ ಅನುಮತಿಯ ಮೇರೆಗೆ ಕಾದಿರಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಸದಸ್ಯ ಸೋಮನಾಥ ನಾಯ್ಕ ವಿಚಾರವನ್ನು ಮುಂದಿಟ್ಟು ಸದಸ್ಯರ ಗಮನಕ್ಕೆ ಬಾರದೇ ಇಷ್ಟೊಂದು ಮೊತ್ತ ಅನುದಾನಕ್ಕೆ ಸಮ್ಮತಿ ಸೂಚಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಅಧ್ಯಕ್ಷರು ಉತ್ತರಿಸುತ್ತಾ ಜಿಲ್ಲಾಡಳಿತದಿಂದ ತುರ್ತಾಗಿ ಸಂದೇಶ ಬಂದಿದ್ದು, ಅಧ್ಯಕ್ಷತೆಯ ನೆಲೆಯಲ್ಲಿ ಸಮ್ಮತಿಪತ್ರವನ್ನು ಜಿಲ್ಲಾಡಳಿತಕ್ಕೆ ಕೂಡಲೇ ಕಳುಹಿಸಲೇ ಬೇಕಾಯಿತು. ಇಲ್ಲದೇ ಹೋಗಿದ್ದರೆ, ಅನುದಾನ ಮಂಜೂರಾತಿಗೆ ತೊಡಕಾಗಲಿದೆ ಎಂದರು.
ಹುದ್ದೆಗಳು ಖಾಲಿ : ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಮಾತನಾಡಿ, ಪುರಸಭಾ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ವಿಚಾರದ ಕುರಿತು ನಿರ್ಣಯಗಳನ್ನು ಪ್ರಸ್ತಾಪಿಸಿದರೂ ಜಿಲ್ಲಾಡಳಿದಿಂದ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳು ಸಿಬ್ಬಂದಿ ಕೊರತೆಗಳ ಬಗ್ಗೆ ಸ್ಪಂದಿಸದಿರುವುದು ತರವಲ್ಲ ಸಿಬ್ಬಂದಿಗಳ ಕೊರತೆಯಿಂದಾಗಿ ಪುರಸಭೆಯ ಅಭಿವೃದ್ಧಿ ಕಾರ್ಯಗಳು ನೆನೆಗುದ್ದಿಗೆ ಬಿದ್ದಿದೆ. ತೆರವುಗೊಂಡಿರುವ ಹುದ್ದೆಗೆ ಕೂಡಲೇ ನೇಮಕಾತಿ ನಡೆಸದೇ ಕೋಟಿ,ಕೋಟಿ ಅನುದಾನಗಳು ವಿನಿಯೋಗಿಸುವ ತಪ್ಪು. ಪ್ರತಿಯೊಂದು ಪುರಸಭೆಗಳಿಗೆ ಎರಡೆರಡು ಇಂಜಿನಿಯರ್ ಗಳಿದ್ದು ಕಾರ್ಕಳ ಪುರಸಭೆಗೆ ಒಬ್ಬರೆ ಇಂಜಿನಿಯರ್ ಇದ್ದಾರೆ ಆದರೆ ತಾಲೂಕಿನ ಶಾಸಕರೆ ಸಚಿವರಾಗಿದ್ದಾರೆ ತೆರೆವಾದ ಇಂಜಿನಿಯರ್ ಹುದ್ದೆಗೆ ನೇಮಿಸಿ ಪೂರ್ಣಕಾಲಿಕ ಹುದ್ದೆಯನ್ನು ನೇಮಕ ಗೊಳಿಸಲಿ ಎಂದರು
ಪುರಸಭಾ ಅಧ್ಯಕ್ಷೆ ಸುಮಕೇಶವ್, ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷಿö್ಮÃ ನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.