



ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಕಂಬಳದ ಮೇಲೆ ನಿಷೇಧ ಹೇರಿದ್ದ ಸುಪ್ರೀಂ ಕೋರ್ಟ್ , ರಾಷ್ಟ್ರಪತಿ ಸುಗ್ರಿವಾಜ್ಞೆ ಹಾಗು ಕಾನೂನು ತಿದ್ದುಪಡಿ ನಡೆಸಿ ಮತ್ತೆ ಕಂಬಳಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈಗ ಮತ್ತೆ ಪೇಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ , ಜಲ್ಲಿಕಟ್ಟು, ಕಂಬಳ, ಎತ್ತಿನಗಾಡಿ ಕ್ರೀಡೆ ಆಯೋಜನೆ ಸಂದರ್ಭ ಕಾನೂನು ಉಲ್ಲಂಘನೆಯಾಗಿದೆ, ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ವ್ಯವಸ್ಥಾಪಕರು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಪೇಟಾ(ಪೀಪಲ್ ಫಾರ್ ದಿ ಎಥಿಕಲ್ ಟ್ರೇಟ್‌ಮೆಂಟ್ ಆಫ್ ಅನಿಮಲ್ಸ್) ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯರ ಪೀಠದೆದುರು ವಿಚಾರಣೆ ಶುರುವಾಗಿದೆ.
ಈ ವಿವಾದ ಸುಪ್ರೀಂ ಕೋರ್ಟ್‌ನ ಜಸ್ಟಿಸ್ ಕೆ.ಎಂ. ಜೋಸೆಫ್ ನೇತೃತ್ವದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಗೆ ಬಂದಿದ್ದು, ನ.29ರಂದು ಪರ-ವಿರೋಧ ವಕೀಲರಿಂದ ವಾದ ಮಂಡನೆಯಾಗಿದೆ. ಪೇಟಾ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ಅವರು ಭಾರ ತೀಯ ಪ್ರಾಣಿ ಕಲ್ಯಾಣ ಮಂಡಳಿ (ಪೇಟಾ) ಸುಪ್ರೀಂ ಕೋರ್ಟ್‌ನ ತೀರ್ಪನ್ನು ಓದುವ ಮೂಲಕ ವಾದ ಆರಂಭಿಸಿದರು. ಜಲ್ಲಿಕಟ್ಟುವಿನಂತಹ ಕ್ರೀಡೆಗಳು ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಕಾರಣವಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಮಾಡಿದ ವಾಸ್ತವಿಕ ಸಂಶೋಧನೆಗಳನ್ನು ಉಲ್ಲೇಖಿಸಿ, ರಾಜ್ಯಗಳು ಅಂಗೀಕರಿಸಿದ ತಿದ್ದುಪಡಿಗಳು ಸಮರ್ಪಕವಾಗಿಲ್ಲ ಎಂದು ವಾದಿಸಿದ್ದರು. ನ್ಯಾಯಮೂರ್ತಿ ಜೋಸೆಫ್ ಅದಕ್ಕೆ ಸಮರ್ಪಕವಾಗಿ ಉತ್ತರಿಸಿದ್ದರು. ಇದರಿಂದ ಕಂಬಳ ಕ್ರೀಡೆಗೆ ಮತ್ತೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ.
ಏನಿದು ಪ್ರಕರಣ ? ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಓಟ ಈ ನೆಲದ ಸಂಸ್ಕೃತಿ, ಜಾನಪದ ವೈಭವ ಬಿಂಬಿಸುವ ಕ್ರೀಡೆಯಾಗಿದ್ದು, ಇದನ್ನು ಉಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಕಾನೂನಿಗೆ ತಿದ್ದುಪಡಿ ಮಾಡಿತ್ತು. ಬಳಿಕ ರಾಷ್ಟ್ರಪತಿಗಳ ಅಂಗೀಕಾರದೊಂದಿಗೆ ಕಾನೂನು ವಿಧೇಯಕ ಅಂಗೀಕೃತಗೊಂಡಿತ್ತು. ಈ ಕಾನೂನು ತಿದ್ದುಪಡಿ ಸಾಂವಿಧಾನಿಕತೆ ಪ್ರಶ್ನಿಸಿ ಮತ್ತು ಈ ಕ್ರೀಡೆಗಳಲ್ಲಿ ರಾಜ್ಯ ಸರಕಾರ ನೀಡಿದ ನಿರ್ದೇಶನಗಳನ್ನು ಸಂಘಟಕರು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೇಟಾ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.