



ಮತ್ತೆ ಅಪ್ಡೇಟ್ ಆಗಿದೆ ವಾಟ್ಸಾಪ್ ಹೊಸ ಸಂದೇಶ ವನ್ನು ಬಳಕೆದಾರರಿಗೆ ಪರಿಚಯಿಸಲಿದೆ . ಅದೇನೆಂದರೆ ವಾಟ್ಸ್ ಆಯಪ್ 'ಮೆಸೇಜ್ ಯುವರ್‌ಸೆಲ್ಫ್' ಎಂಬ ಹೊಸ ವೈಶಿಷ್ಟ್ಯ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಈ ಒಂದು ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸ್ ಆಯಪ್ ಅನ್ನು ಅಪ್ ಡೇಟ್ ಮಾಡಿ ಇಲ್ಲವಾದರೆ ವಾಟ್ಸ್ ಆಯಪ್ ಅಪ್ಲಿಕೇಶನ್ ತೆರೆಯಿರಿ. ಅಲ್ಲಿ ಹೊಸ ಚಾಟ್ ರಚಿಸಿ ಅದಕ್ಕೆ ಕ್ಲಿಕ್ ಮಾಡಿ, ಈಗ ನಿಮ್ಮ ಸಂಪರ್ಕ ಪಟ್ಟಿಯ ಮೇಲ್ಭಾಗದಲ್ಲಿ ನಿಮ್ಮ ಸಂಪರ್ಕವನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೀವೇ ಸಂದೇಶ ಕಳುಹಿಸಲು ಪ್ರಾರಂಭಿಸಬಹುದು
ವಾಟ್ಸ್ ಆಯಪ್ ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ,ಟಿಪ್ಪಣಿಗಳನ್ನು , ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದನ್ನ ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು. ಈ ಮೂಲಕ ಇದು ತನ್ನೊಂದಿಗೆ 1:1 ಚಾಟ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಚಾಟ್ ಗೆ ನೀವು ಮಾತ್ರವೇ ಪ್ರವೇಶಿಬಹುದು, ನಿಮಗೆ ಮಾತ್ರ ಗೋಚರಿಸುವುದರ ಜೊತೆಗೆ ಖಾಸಗಿ ಭದ್ರತೆಯನ್ನೂ ನಿಮಗೆ ಒದಗಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.