



ವಾಟ್ಸಪ್ ನಲ್ಲಿ ಹೊಸ ಫೀಚರ್ ಒಂದನ್ನು ಅಳವಡಿಕೆ ಮಾಡಲಾಗಿದೆ. 60 ಸೆಕೆಂಡುಗಳ ಕಾಲ ಶಾರ್ಟ್ ವಿಡಿಯೋ ವನ್ನು ರೆಕಾರ್ಡ್ ಮಾಡಿ, ತಮ್ಮ ಕಾಂಟ್ಯಾಕ್ಟ್ಸ್ ನಲ್ಲಿ ಹಂಚಿಕೊಳ್ಳಬಹುದಾದ ವಿಶೇಷ ಫೀಚರ್ ಅನ್ನು ವಾಟ್ಸ್ಆ್ಯಪ್ ಅಭಿವೃದ್ಧಿ ಪಡಿಸುತ್ತಿದೆ.
ವಾಟ್ಸ್ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ತಿಳಿಸುವ, ‘Wabetainfo’ ಈ ಕುರಿತಾದ ಮಾಹಿತಿ ಒಂದನ್ನು ಹೊರಹಾಕಿದೆ. ಬಳಕೆದಾರರು ತಮ್ಮ ಕಾಂಟ್ಯಾಕ್ಟ್ಸ್ ನಲ್ಲಿ 60 ಸೆಕೆಂಡುಗಳವರೆಗೆ ಶಾರ್ಟ್ ವಿಡಿಯೋವನ್ನು ರೆಕಾರ್ಡ್ ಮಾಡಿ ಮತ್ತು ಹಂಚಿಕೊಳ್ಳುವ ಫೀಚರ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಿದೆ. ಇದಕ್ಕೆ ವಿಡಿಯೋ ಮೆಸೇಜ್ ಎಂದು ಹೆಸರಿಡಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಶೇರ್ ಮಾಡುವುದು, ಹಾಗೂ ಈ ಹೊಸ ಫೀಚರ್ (ವಿಡಿಯೋ ಮೆಸೇಜ್) ಬೇರೆ ಬೇರೆ ಆಗಿದೆ. ಹೊಸ ಆಯ್ಕೆಯ ಮೂಲಕ ಬಳಕೆದಾರರು ಒಬ್ಬರ ಚಾಟ್ ತೆರೆದು ರಿಯಲ್ ಟೈಮ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.