



ಅಂಕಿತ, ಜರ್ನಲಿಸಂ ವಿಭಾಗ,ಎಂ. ಪಿ. ಎಂ ಕಾಲೇಜು ಕಾರ್ಕಳ,
ಕಾರ್ಕಳ :- ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಡು ಪ್ರಾಣಿಗಳು ಹಾಗು ಮಾನವ ಸಂಘರ್ಷಗಳು ನಿತ್ಯ ಹೆಚ್ಚುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಕಾಡಿನಿಂದ ನಾಡಿಗಿಳಿದ ಕಾಡು ಪ್ರಾಣಿಗಳು ಕಾಡು ಪ್ರಾಣಿಗಳ ಕಾಟಕ್ಕೆ ಕೃಷಿ ನಾಶವಾಗುತ್ತಿದ್ದು ಕೃಷಿಕರು ಆತಂಕಕ್ಕೆ ಈಡಾಗಿದ್ದಾರೆ.
ಕೃಷಿ ನಾಶ :- ಮಾಳ ಗ್ರಾಮದಲ್ಲಿ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಯಿದೆ. ಉಳಿದ ಭಾಗದಲ್ಲಿ ಸುಮಾರು 3000 ಹೆಕ್ಟೇರ್ ಗಿಂತಲೂ ಅಧಿಕ ಕಾಡುಗಳಿದ್ದು ಕುದುರೆ ಮುಖ ವನ್ಯಜೀವಿ ವಿಭಾಗ ದಲ್ಲಿ ಬರುತ್ತವೆ. ಈ ಭಾಗದಲ್ಲಿ ಕಾಳುಮೆಣಸು , ಅಡಿಕೆ ಕೊಕ್ಕೊ, ತೆಂಗು, ಕಾಫಿ, ಏಲಕ್ಕಿ , ಮಾವು ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಸುತ್ತಾರೆ .ಆದರೆ ಮಂಗಗಳು, ಕಾಟಿಗಳು ,ಕಡವೆ , ಕೆಂಚಣಿಲು , ಸೇರಿದಂತೆ ಹಂದಿಗಳ ಅಟ್ಟಹಾಸಗಳಿಂದ ರೈತರು ವಿಮುಖರಾಗಿದ್ದಾರೆ .
ಪರಿಹಾರ ನೀಡಿ : ಈಗಾಗಲೇ ಏಲಕ್ಕಿ, ಮಾವು, ರಾಂಬುಟನ್, ಕೋಕೋ,ಅಡಿಕೆ ಗಿಡದ ಕೃಷಿ, ಹೂವಿನ ತೋಟ,ತರಕಾರಿ ತೋಟಗಳಲ್ಲಿ ಕಾಡುಪ್ರಾಣಿಗಳಿಂದ ಹಾನಿಯಾಗಿದ್ದು ಪರಿಹಾರ ಒದಗಿಸುವಂತೆ ರೈತರು ಸರಕಾರವನ್ನು ಒತ್ತಾಯಿಸುತಿದ್ದಾರೆ . ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಕಾಡುಪ್ರಾಣಿಗಳಿಂದ ಹಾನಿಯಾಗಿರುವ ಪ್ರದೇಶಗಳ ಮಾಹಿತಿಯನ್ನು ಗ್ರಾಮ ಪಂಚಾಯತಿ ಗೆ ದೂರನ್ನು ನೀಡಿದ್ದಾರೆ. ಕುದುರೆ ಮುಖ ವನ್ಯಜೀವಿ ವಿಬಾಗಕ್ಕೆ ದೂರು ನೀಡಲು ಸಿದ್ದರಾಗಿದ್ದಾರೆ.
ಗ್ರಾಮಯಲ್ಲಿ ಪ್ರಶ್ನಿಸುವೆ: ಈಗಾಗಲೇ ಕಾಡು ಪ್ರಾಣಿಗಲ ಹಾವಳಿಯಿಂದ ಕೃಷಿ ನಾಶವಾಗಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು. ಕಳೆದ ಬಾರಿ ಯು ಕೃಷಿ ಹಾನಿಯಾದ ಬಗ್ಗೆ ದೂರು ನೀಡಿದ್ದರು ಇನ್ನೂ ಪರಿಹಾರ ಲಭಿಸಿದಲ್ಲ ಎಂದು ಜೋಷಿ ಮನೆತನದವರು ತಿಳಿಸಿದ್ದಾರೆ.
ಮಾಳ ಗ್ರಾಮದಲ್ಲಿ ಕಾಡುಪ್ರಾಣಿಗಳ ಅಟ್ಟಹಾಸ ಜಾಸ್ತಿಯಾಗಿದೆ ಇದು ನಮಗೂ ಸಮಸ್ಯೆ ಆಗಿದೆ ಹಲವಾರು ಕೃಷಿಗಳು ನಾಶವಾಗಿದೆ . ಬೆಳೆಸಿದ ಬೆಳೆ ಕೈಗೆ ಸಿಗದಿದ್ದರೆ ದುರಂತ ಲಕ್ಷ್ಮಿ ಶೆಟ್ಟಿ( ಕೃಷಿಕರು ).
ಈಗಾಗಲೇ ಸ್ಥಳೀಯ ಆಡಳಿತ ಮೂಲಕ ಮಾಹಿತಿ ನಮಗೆ ತಲುಪಿದೆ.ಹಾನಿಯಾದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನಿಡುವಂತೆ ತಿಳಿಸುವೆ. ಅದಷ್ಟು ಬೇಗ ಸ್ಪಂದಿಸಿ ಪರಿಹಾರ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ದಿನೇಶ್ ವಲಯ ಅರಣ್ಯ ಅಧಿಕಾರಿ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.