



ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ದೇರೆಬೈಲ್ ಕೊಂಚಾಡಿಯ ಬೋರುಗುಡ್ಡೆ ನಿವಾಸಿಯಾದ ತುಕರಾಮ(44) ಅವರು ಬ್ರೈನ್ ಎಮರೇಜ್ ನಿಂದ ಆಗಸ್ಟ್ 20ರಂದು ಮೃತಪಟ್ಟಿದ್ದಾರೆ.
ಬಿಪಿ ಕಾಯಿಲೆ ಬಿಟ್ಟರೆ ಬೇರೆ ಯಾವುದೇ ಕಾಯಿಲೆ ಅವರಿಗೆ ಇರಲಿಲ್ಲ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅವರು ಆಗಸ್ಟ್ 18ರಂದು ರಾತ್ರಿ ಮಲಗುವ ವರೆಗೂ ಆರೋಗ್ಯವಾಗಿಯೇ ಇದ್ದರು. ಆದರೆ ಆಗಸ್ಟ್ 19ರಂದು ಬೆಳಗ್ಗೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗಿದ್ದರು. ತಕ್ಷಣ ಅವರನ್ನು ಕುಂಟಿಕಾನದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅಧಿಕ ರಕ್ತದೊತ್ತಡದಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗಿದೆಯೆಂದು ಹೇಳಿ ಐಸಿಯುಗೆ ಸೇರಿಸಿದರು. ಆದರೆ ಆಗಸ್ಟ್ 20ರಂದು ಬೆಳಗ್ಗೆ ತುಕರಾಮ ಅವರು ಮೃತಪಟ್ಟರು. ಎ.ಜೆ. ಆಸ್ಪತ್ರೆಯಲ್ಲಿ 72 ಸಾವಿರ ಬಿಲ್ ಆಗಿತ್ತು. ಇದಲ್ಲದೆ ಆರಂಭದಲ್ಲಿ ಅಡ್ಮಿಶನ್ ಫೀಸ್ 15 ಸಾವಿರ ಪಾವತಿಸಲಾಗಿತ್ತು. ತುಕರಾಮ ಅವರ ಬಡ ಕುಟುಂಬ ಸಾಲ ಮಾಡಿ ಆಸ್ಪತ್ರೆಗೆ ಬಿಲ್ ಪಾವತಿಸಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಮೃತ ತುಕರಾಮ ಅವರಿಗೆ ಪತ್ನಿ ಸುಜಾತಾ ಹಾಗೂ ಎಸ್ಸೆಸ್ಸೆಲ್ಸಿ ಮಗ ದಿಶಾನ್ ಇದ್ದಾರೆ. ಬಡ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. ಕೂಡು ಕುಟುಂಬದ ವ್ಯವಸ್ಥೆಯಲ್ಲಿರುವ ಅವರಿಗೆ ಸ್ವಂತ ರೇಶನ್ ಕಾರ್ಡ್ ಕೂಡ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕ್ ನಲ್ಲಿ 90 ಸಾವಿರಕ್ಕೆ ಅಡವಿಟ್ಟ ಕರಿಮಣಿ, ಒಂದ ಸರ ಹಾಗೂ ಉಂಗುರ ಇದೆ. ಹಾಗೆ ಎಚ್ ಡಿಎಫ್ ಸಿಯಿಂದ ತೆಗೆದ 25 ಸಾವಿರ ರೂ. ಗುಂಪು ಸಾಲ ಇದೆ. ಕೆಲವು ಸಣ್ಣ ಪುಟ್ಟ ಕೈಸಾಲ ಕೂಡ ಇದೆ. ಕುಟುಂಬದಲ್ಲಿ ಯಾವುದೇ ಉಳಿತಾಯ, ವಿಮೆ ಇಲ್ಲ.
ಸುಜಾತಾ ಅವರಿಗೆ ಅಪ್ಪ, ಅಣ್ಣ-ತಮ್ಮಂದಿರು ಇಲ್ಲ. ಅನಾರೋಗ್ಯದ ತಾಯಿ ಇದ್ದಾರೆ. ಜೀವನ ಸಾಗಿಸುವುದು ಅವರಿಗೆ ಕಷ್ಟಸಾಧ್ಯವಾಗಿದೆ. ಅವರ ಮಗನ ಮಗನ ಮುಂದಿನ ಶಿಕ್ಷಣ ಹಾಗೂ ಬದುಕಿಗೆ ಸಹಾಯಬೇಕಾಗಿದೆ. ಉದಾರಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬೇಕಾಗಿ ವಿನಂತಿ
SUJATHA SB A/c No: 5062500100959801 IFSC code: KARB0000506 MICR CODE: 575052018 KARNATAKA BANK KADRI BRANCH, MANGALURU
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.