



ಕರೋನ ಸೋಂಕು ಇಳಿಕೆ ಯಾಗುತಿದ್ದಂತೆ ದೇಶದಾದ್ಯಂತ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನ ಮತ್ತೆ ಕಚೇರಿಗೆ ಬರುವಂತೆ ತಿಳಿಸುತ್ತಿವೆ. ಲಾಕ್ ಡೌನ್ ಮುಗಿದು ಬರೋಬ್ಬರಿ 18 ತಿಂಗಳ ನಂತರ ವಿಪ್ರೋ ತನ್ನ ಉದ್ಯೋಗಿಗಳು ಸೋಮವಾರದಿಂದ ಕಚೇರಿಗಳಿಗೆ ಮರಳುತ್ತಾರೆ ಎಂದು ವಿಪ್ರೋ ಹೇಳಿದೆ.
ಈ ಬಗ್ಗೆ ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ ಜಿ ಅವರು ಟ್ವಿಟರ್ʼನಲ್ಲಿ ಮಾಡಿದ್ದು, ’18 ಸುದೀರ್ಘ ತಿಂಗಳ ನಂತರ, ನಮ್ಮ ನಾಯಕರು ವಿಪ್ರೋ ನಾಳೆಯಿಂದ (ವಾರಕ್ಕೆ ಎರಡು ಬಾರಿ) ಕಚೇರಿಗೆ ಮರಳುತ್ತಿದ್ದಾರೆ. ಎಲ್ಲರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ, ಎಲ್ಲರೂ ಕಛೇರಿಗೆ ಹೋಗಲು ಸಿದ್ಧರಾಗಿದ್ದಾರೆ – ಸುರಕ್ಷಿತವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಲಿದ್ದಾರೆ. ನಾವು ಇದನ್ನ ಸೂಕ್ಷ್ಮವಾಗಿ ಗಮನಿಸುತ್ತೇವೆ’ ಎಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.