



ಅಜೆಕಾರು: ಮಕ್ಕಳಿಗೆ ಸಕಾಲದಲ್ಲಿ ಸೂಕ್ತ ಪ್ರೋತ್ಸಾಹ ನೀಡದರೆ ಅವರ ಪ್ರತಿಭಾ ವಿಕನವಾಗುವುದು ಅವರು ಶಕ್ತಿಶಾಲಿಗಳಾಗಿ ಸಮಾಜದಲ್ಲಿ ಬೆಳಗುತ್ತಾರೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಹರಿಖಂಡಿಗೆ ಶ್ರೀ ನಾರಾಯಣೀ ದೇವಿ ಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ತುಳುವ ವೇದಿಕೆಯಲ್ಲಿ ಶ್ರವಣಬೆಳಗೊಳದ ಶ್ರೀ ಚಾರಿಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ ನಡೆಸಿದ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರತಿಭಾ ರತ್ನ ಗೌರವ ಪ್ರದಾನಿಸಿ ಮಾತನಾಡುತ್ತಿದ್ದರು. ಮನುಷ್ಯರನ್ನು ಸಮಾಜದಿಂದ ವಿಮುಖಗೊಳಿಸಿಲು, ಸಮಾಜವನ್ನು ಒಡೆಯಲು ವಿಫುಲ ಅವಕಾಶಗಳಿವೆ ಆದರೆ ಸಮಾಜವನ್ನು ಒಂದುಗೂಡಿಸುವ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಕಾರ್ಯಕ್ರಮವನ್ನು ಭಜನೆಯ ಮೂಲಕ ಉದ್ಘಾಟಿಸಿದ ಕ್ಷೇತ್ರದ ಧರ್ಮದರ್ಶಿ ಸುರೇಶ್ ಜಿ.ಪೈ ಅಭಿಪ್ರಾಯ ಪಟ್ಟರು. ಮಕ್ಕಳನ್ನು ಅವರವರ ಆಸಕ್ತಿಗಳಿಗೆ ಅನುಸಾರವಾಗಿ ಬೆಳೆಸಿ ಒತ್ತಡ ಹೇರಬೇಡಿ ಹಿರಿಯ ಉದ್ಯಮಿ ಉಡುಪಿ ವಿಶ್ವನಾಥ ಶೆಣೈ ಕರೆ ನೀಡಿದರು. ಹಿರಿಯ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಅವರು ಹಾಸ್ಯಮಿಶ್ರಿತ ಭೋದಪ್ರದ ಮಾತುಗಳಿಂದ ಗಮನಸೆಳೆದು ಸಂಘಟಕ ಡಾ.ಶೇಖರ ಅಜೆಕಾರು ದಂಪತಿಯನ್ನು ಗೌರವಿಸಿದರು. ರೇಡಿಯೋ ಮಣಿಪಾಲ ಸಂಯೋಜಕಿ ಡಾ. ರಶ್ಮಿ ಅಮ್ಮಂಬಳ, ಬೆಂಗಳೂರಿನಲ್ಲಿ ಮುಖ್ಯೋಪಾದ್ಯಾಯಿನಿ ಬಿಂದು ಕೆ.ವಿ, ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಅರುಣ್ ಶೆಟ್ಟಿಗಾರ್, ದಕ್ಷಿಣ ಜಿಲ್ಲಾ ಮಹಿಳಾ ಕಾರ್ಮಿಕರ ಸಂಘದ ಅಧ್ಯಕ್ಷೆ ಪದ್ಮಶ್ರೀ ನಿಡ್ಡೋಡಿ, ಜೆರಿಮೆರಿ ಕನ್ನಡ ಸಂಘದ ಮಾಜಿ ಕಾರ್ಯದರ್ಶಿ ರವಿ.ಟಿ. ಪೂಜಾರಿ ಕೊಪ್ಪ ಮುಖ್ಯ ಅತಿಥಿಗಳಾಗಿದ್ದರು. ಪ್ರಜ್ಞಾ.ಪಿ ಹರಿತ್ಸಾ- ಶ್ರವಣಬೆಳಗೊಳ, ಮೇಘನಾ ಬಸವರಾಜ ಹಡಪದ- ಧಾರವಾಡ, ಸಿಂಚನಾ ಎಸ್. ಶಂಕರ್- ಬೆಂಗಳೂರು, ಚಿತ್ತರಂಜನ್ ಕಡಂದೇಲು-ಕಾಸರಗೋಡು, ಧನ್ವಿ ರೈ ಕೋಟೆ- ಪುತ್ತೂರು, ಲಾಲಿತ್ಯ ಕುಮಾರ್ ಬೇಲೂರು- ಹಾಸನ, ನಿರೀಕ್ಷ ವಿಟ್ಲ- ದಕ್ಷಿಣ ಕನ್ನಡ, ಸೃಷ್ಠಿ ಬೆಂಗಳೂರು, ಪ್ರೀತಮ್ ದೇವಾಡಿಗ ಮುದ್ರಡಿ- ಉಡುಪಿ, ತನ್ವಿತಾ ಮೊಗವೀರ-ಉಡುಪಿ, ಚಿನ್ವೀಶ್ ಕೊಟ್ಟಾರಿ ಮಂಗಳೂರು, ಅನ್ವಿತಾ ವಿಟ್ಲ- ದ.ಕ, ಸಿರಿ ಎಸ್.- ಬೆಂಗಲೂರು, ಪ್ರಥಮ್ ಮಾರೂರು- ವೇಣೂರು, ಯೋಗ್ನ ಬಿ. ಅಮೀನ್ ಮಂಗಲೂರು, ಸಾನ್ವಿ ಗುರುಪುರ- ಮಂಗಳೂರು, ದಿಯಾ ಆಳ್ವ ಮೂಡುಬಿದಿರೆ, ಆದ್ಯಂತ್ ಅಡೂರು-ಕಾಸರಗೋಡು ಪುರಸ್ಕೃತರು. ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಆಶ್ವಿನಿ ಕುಲಾಲ್ ಕಡ್ತಲ ಸ್ವಾಗತಿಸಿದರು. ಮಕ್ಕಳ ವಿಭಾಗದ ಸುನಿಧಿ ಎಸ್. ಅಜೆಕಾರು ವಂದಿಸಿದರು. ಯುವ ವಾಗ್ಮಿ ಕಾವ್ಯ ಕಣಜಾರು ಮತ್ತು ಸೌಮ್ಯಶ್ರೀ, ಸಂತೋಷ ಜೈನ್ ಎಣ್ಣೆಹೊಳೆ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾ ರತ್ನ ಪುರಸ್ಕೃತರ ಪ್ರತಿಭಾ ಪ್ರದರ್ಶನದ ಜೊತೆಗೆ ಅರ್ಚಿತ್ ಕಶ್ಯಪ್, ಅಶ್ಮಿತ್ ಎ.ಜೆ ಮಂಗಳೂರು, ಅರ್ಚನಾ ಸಂಪ್ಯಾಡಿ, ಸುನಿಜ ಅಜೆಕಾರು , ಉದಯ ಪಿ ದಾಸಗದ್ದೆ ಕಾರ್ಯಕ್ರಮ ನೀಡಿದರು. ಕ್ಷೇತ್ರದ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮವಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.