logo
WhatsApp Image 2026-04-02 at 14.46.04.jpeg
hindalco everlast.jpeg

ಅಂಡಾರು ಗ್ರಾಮದಲ್ಲಿ ಪತಿಯ ಆಪರೇಷನ್ ಗೆ ಹಣ ವಿಲ್ಲದ ಕಾರಣಕ್ಕಾಗಿ ಮನನೊಂದ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
14 Apr 2022
post image

ಪತಿಯ ಆಪರೇಷನ್ ಗೆ ಹಣ ಹೊಂದಿಸಲು ಆಗದ ಕಾರಣ ಮಹಿಳೆಯೊಬ್ಬರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಡಾರು ಗ್ರಾಮದ ಬಾಳೆಹಿತ್ಲು ಎಂಬಲ್ಲಿ ನಡೆದಿದೆ. ಮೃತರನ್ನು ಅಂಡಾರು ಗ್ರಾಮದ ಬಾಳೆಹಿತ್ಲು ನಿವಾಸಿ 45 ವರ್ಷದ ವನಿತಾ ಎಂದು ಗುರುತಿಸಲಾಗಿದೆ. ವನಿತಾ ಅವರ ಪತಿ ಸತೀಶ್ ಎನ್. ರಾವ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಅದರಂತೆ ಆಪರೇಷನ್ ಗೆ ಹಣದ ವ್ಯವಸ್ಥೆ ಮಾಡಲು ವನಿತಾ ಮನೆಗೆ ಬಂದಿದ್ದು, ಹಣ ಹೊಂದಿಸಲು ಆಗದ ಕಾರಣ ಮನನೊಂದು ಎ‌.13ರಂದು ಬೆಳಿಗ್ಗೆ ಮನೆಯ ಎದುರಿನ‌ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.