



ಮಲೇಷ್ಯಾ: ಮೀನು ಕೆಲವರ ಮೆಚ್ಚಿನ ಆಹಾರ ಪದ್ಧತಿ. ನಾನಾ ಬಗೆಯಲ್ಲಿ ಮೀನುಗಳನ್ನು ಸೇವಿಸುವ ಜನರಿದ್ದಾರೆ. ಮೀನು ಖಾದ್ಯಗಳನ್ನು ರುಚಿ ರುಚಿಯಾಗಿ ತಯಾರಿಸುತ್ತಾರೆ. ಮೀನೊಂದನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಪತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿರುವುದು ವರದಿಯಾಗಿದೆ.
ಮಾ. 25 ರಂದು ವೃದ್ಧ ದಂಪತಿ ಮಲೇಷ್ಯಾದ ಜೋಹರ್ ನಲ್ಲಿರುವ ಸ್ಥಳೀಯ ಅಂಗಡಿಯೊಂದರಿಂದ ‘ಪಫರ್’ ಎಂಬ ಮೀನನ್ನು ಖರೀದಿಸಿದ್ದಾರೆ. ಈ ಮೀನು ಕೆಲ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಈ ಮೀನಿನ ವಿಷವನ್ನು ಅನುಭವಿ ಚೆಫ್ ಗಳು ಜಾಗ್ರತೆಯಿಂದ ತೆಗೆದು ಅದರ ಪದಾರ್ಥವನ್ನು ಮಾಡುತ್ತಾರೆ. ದಂಪತಿಯ ಮಕ್ಕಳು ಕೂಡಲೇ ತಂದೆ – ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಆಕೆಯ ಪತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೋಮಾದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.