



ವರಂಗ:ಬೈಕ್ ನಲ್ಲಿ ತೆರಳುತ್ತಿದ್ದ ಸವಾರೆಯೊಬ್ಬರು ರಸ್ತೆಗೆ ಎಸೆಯಪಟ್ಟು ಸಾವನ್ನಪ್ಪಿರುವ ಘಟಕ ವರಂಗ ಗ್ರಾಮದಲ್ಲಿ ನಡೆದಿದೆ.ಸುನೀತಾ(45 ) ಮೃತ ಮಹಿಳೆ.
ಅವರು ದಿವಾಕರ ಎಂಬುವರ ಬೈಕ್ ನಲ್ಲಿ ವರಂಗದಿಂದ ಉಪ್ಪಳಕ್ಕೆ ತೆರಳುತ್ತಿದ್ದಾಗ ಮೈಲುಕಲ್ಲು ಎಂಬಲ್ಲಿಗೆ ತಲುಪಿದಾಗ ದಿವಾಕರ್ ಅವರು ಒಮ್ಮೆಲೇ ಬ್ರೇಕ್ ಹಾಕಿದ್ದಾರೆ. ಪರಿಣಾಮ ಡಾಂಬರು ರಸ್ತೆಗೆ ಬಿದ್ದ ಸುನೀತಾ ಅವರ ತಲೆಗೆ ಬಲವಾದ ಏಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.ಈ ಬಗ್ಗೆ ಪೊಲೀಸ್ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.