



ಕಾರ್ಕಳ: ಕಾರುಗಳು ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಧರ್ಮಸ್ಥಳ ಕಾರ್ಕಳ ಹೆದ್ದಾರಿಯ ನಲ್ಲೂರು ನಮನ ಬೇಕರಿ ಬಳಿ ನಡೆದಿದೆ . ತಾರ ಸುಬ್ರಾಯ ರಾಯ್ಕರ್( ೭೦)ಮೃತಪಟ್ಟವರು. ಧರ್ಮಸ್ಥಳದಿಂದ ಕಾರ್ಕಳ ಕಡೆಗೆ ಬರುತಿದ್ದ ಕಾರು ತೀರ ಬಲಬದಿಗೆ ಚಲಾಯಿಸಿ ದ ಪರಿಣಾಮವಾಗಿ ಕಾರ್ಕಳದಿಂದ ಧರ್ಮಸ್ಥಳ ಕಡೆಗೆ ಸಾಗುತಿದ ಅಶೋಕ್ ಕುರ್ಡೆಕರ್ ಚಲಾಯಿಸುತಿದ್ದ ಕಾರಿಗೆ ಢಿಕ್ಕಿಹೊಡೆದಿದೆ. ಢಿಕ್ಕಿಯ ರಭಸಕ್ಕೆ ತಾರ ಸುಬ್ರಾಯ ರಾಯ್ಕರ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಂಡತಿ ಅನುಷಾ ,ಮಾವ ಸುಬ್ರಾಯ ರಾಯ್ಕರ್ ಸಣ್ಣ ಪುಟ್ಟ ಗಾಯಗಳಾಗಿವೆ .ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.