logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಟಿಪ್ಪರ್‌ನಿಂದು ಕೆಳಕ್ಕೆ ಬಿದ್ದು ಕಾರ್ಮಿಕ ಗಂಭೀರ ಗಾಯ

ಕರಾವಳಿ
share whatsappshare facebookshare telegram
25 Feb 2023
post image

ಕಾರ್ಕಳ : ಕ್ರಶರ್‌ನಲ್ಲಿ ಟಿಪ್ಪರ್ ಗೆ ಜಲ್ಲಿ ತುಂಬಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಟಿಪ್ಪರ್‌ನಿಂದು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಫೆ.22ರಂದು ನಡೆದಿದೆ.

ಬೆಳ್ಮಣ್‌ನಲ್ಲಿರುವ ನಿತ್ಯಾನಂದ ಶೆಟ್ಟಿ ಎಂಬವರ ಮಾಲಕತ್ವದ ದುರ್ಗಾ ಕ್ರಶರ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಟಿಪ್ಪರ್ ಚಾಲಕ ರವಿ ಟಿಪ್ಪರ್‌ನ ಬಂಕರ್‌ ನಿಂದ ಜಲ್ಲಿಯನ್ನು ಲೋಡ್ ಮಾಡುತ್ತಿದ್ದಾಗ ಕ್ರಶರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾವ್ಕಾರ್ ಬಾರೋ ಎಂಬಾತ ಟಿಪ್ಪರ್‌ನ ಮೇಲೆ ಹತ್ತಿ ಜಲ್ಲಿಯನ್ನು ಲೆವೆಲ್ ಮಾಡುತ್ತಿದ್ದ.

ಈ ವೇಳೆ ಕ್ರಶರ್ ಮಾಲೀಕ ನಿತ್ಯಾನಂದ ಶೆಟ್ಟಿ ಹಾಗೂ ಟಿಪ್ಪರ್ ಚಾಲಕ ರವಿ ಅವರ ಅಜಾಗರೂಕತೆಯಿಂದಾಗಿ ಸಾವ್ಕಾರ್ ಆಯತಪ್ಪಿ ಟಿಪ್ಪರ್‌ನಿಂದ ಕೆಳಗೆ ಪಿಲ್ಲರ್‌ನ ಮಧ್ಯದಲ್ಲಿರುವ ಕಲ್ಲಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.