



ಉಡುಪಿ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ರಿಸರ್ಚ್, ಮೆಥೆಡೋಲಾಜಿ, ರಿಸರ್ಚ್ ಪಬ್ಲಿಕೇಷನ್ಸ್ ಅಂಡ್ ಎಥಿಕ್ಸ್ ಎಂಬ ವಿಷಯದ ಕುರಿತು ಅಕ್ಟೋಬರ್ 3 ರಿಂದ 7 ರ ವರೆಗೆ ಒಟ್ಟು ಐದು ದಿನಗಳ ಕಾರ್ಯಾಗಾರವನ್ನು ಅಕಾಡೆಮಿಯ ಕಚೇರಿಯಾದ ಬೆಂಗಳೂರಿನ ವಿದ್ಯಾರಣ್ಯಪುರ ಅಂಚೆ, ಜಿಕೆವಿಕೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣದ ಪ್ರೊ. ಯು.ಆರ್. ರಾವ್, ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಉಪನ್ಯಾಸ ನೀಡಲಿದ್ದು, ಈ ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯಾದ್ಯಂತ ಸ್ನಾತಕೋತ್ತರ ವಿಜ್ಞಾನ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು'' ಅಧ್ಯಾಪಕರು ಹಾಗೂ ಯುವ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಚಿಸುವವರು ಸೆಪ್ಟೆಂಬರ್ 30 ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಕಾಡೆಮಿಯ ವೆಬ್‌ಸೈಟ್ http://www.kstacademy.in ಅಥವಾ ವೈಜ್ಞಾನಿಕಾಧಿಕಾರಿ ವಿ. ಕೆ. ಶ್ರೀನಿವಾಸು ಮೊ. ನಂ. 9620767819 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.