logo
WhatsApp Image 2026-04-02 at 14.46.04.jpeg
hindalco everlast.jpeg

ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ.

ಟ್ರೆಂಡಿಂಗ್
share whatsappshare facebookshare telegram
17 Mar 2025
post image

ಮಂಗಳೂರು: “ಗ್ರಾಹಕರು ಖರೀದಿಸುವಾಗ ಯಾವುದೇ ವಂಚನೆಗೆ ಒಳಗಾಗಬಾರದು ಹಾಗೂ ತಮ್ಮ ಹಕ್ಕುಗಳ ಬಗೆಗೆ ಸರಿಯಾಗಿ ತಿಳಿದಿರಬೇಕು. ಪ್ರತಿಯೋರ್ವ ಗ್ರಾಹಕನು ತನ್ನ ಹಕ್ಕು ಮತ್ತು ಭಾದ್ಯತೆಗಳನ್ನು ತಿಳಿದು ನಡೆಯಬೇಕೆಂದು” ಮುಖ್ಯ ಅತಿಥಿಯಾಗಿ ಆಗಮಿಸಿದ ಅಡ್ವಕೇಟ್ ಕೆ .ಪೃಥ್ವಿರಾಜ್ ರೈ ,ಮಾಜಿ ಅಧ್ಯಕ್ಷರು, ವಕೀಲರ ಸಂಘ ಮಂಗಳೂರು ಮಾತನಾಡಿ ಹೇಳಿದರು.

ಪಿ.ಎ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಒಡಂಬಡಿಕೆಯ ಅನ್ವಯ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಮಾರ್ಚ್ 15, 2025 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯು ನಡೆಯಿತು.

ಕಾರ್ಯಕ್ರಮದ ಪೀಠಿಕೆಯ ಕುರಿತು ಡಾ.ಅಬೂಬಕ್ಕರ್ ಸಿದ್ಧಿಕ್, ಒಡಂಬಡಿಕೆಯ ಸಂಚಾಲಕರು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ವಿವರಿಸಿಕೊಟ್ಟರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಯವಂತ ನಾಯಕ್ ಪ್ರಾಧ್ಯಾಪಕರು ಅರ್ಥಶಾಸ್ತ್ರವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಶರಫುದ್ದೀನ್ ಪಿ.ಕೆ, ಎ .ಜಿ .ಎಮ್ ಕ್ಯಾಂಪಸ್ ಪಿ.ಎ.ಇ.ಟಿ , ಪಿ.ಎ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ.ಸಯ್ಯದ್ ಅಮೀನ್ ಅಹ್ಮದ್, ಪಿ.ಎ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಜಿ ಹರಿಕೃಷ್ಣನ್, ಐ.ಕ್ಯೂ.ಎ.ಸಿ ಸಂಯೋಜಕರರಾದ ಶ್ರೀಮತಿ ವಾಣಿಶ್ರೀ ವೈ ವೇದಿಕೆಯಲ್ಲಿ ಆಸೀನರಾಗಿದ್ದರು.

ವಿದ್ಯಾರ್ಥಿಗಳಾದ ಹಿಬಾ ಮರ್ಯಂ ಕಾರ್ಯಕ್ರಮ ನಿರೂಪಿಸಿದರೆ, ಫರ್ಹಾನ್ ಸ್ವಾಗತಿಸಿ, ತಶ್ಮೀಯಾ ವಂದಿಸಿದರು. ಇರ್ಫಾದ್ ಪ್ರಾರ್ಥನೆ ನೆರವೇರಿಸಿದರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.