



ಹೆಬ್ರಿ: ಜೆಸಿಐ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಸಿಐ ಉದ್ಯಾನವನ ರಚಿಸಿ ಗಿಡನೆಡುವ ಕಾರ್ಯಕ್ರಮ ಕೆಪಿಎಸ್ ಪ್ರಾಥಮಿಕ ಶಾಲೆ ಮುನಿಯಾಲಿನಲ್ಲಿ ಶಾಲಾ ಇಕೋ ಕ್ಲಬ್ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೆಸಿಐ ಹೆಬ್ರಿಯ ಪೂರ್ವಧ್ಯಕ್ಷರಾದ ಜೆಸಿ ಪುಟ್ಟಣ್ಣ ಭಟ್ ಆಗಮಿಸಿ ಪರಿಸರ ಸಂರಕ್ಷಣೆಯಲ್ಲಿ ಪ್ರಾಣಿಗಳ ಪಾತ್ರ ಹಾಗೂ ಕಸಿ ಕಟ್ಟುವ ಬಗ್ಗೆ ಸಮಗ್ರ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ನೀಡಿದರು, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದು ಮಕ್ಕಳಲ್ಲಿ ಅರಣ್ಯ ಬೆಳೆಸುವ ಮಹತ್ವ ಹಾಗೂ ಪರಿಸರ ರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸಿದರು, ಹೆಬ್ರಿ ಜೆಸಿಐ ನ ಅಧ್ಯಕ್ಷರಾದ ರೂಪೇಶ್ ನಾಯ್ಕ್ ಸದಸ್ಯರಾದ ಅಕ್ಷತಾ ರೂಪೇಶ್, ಜೆಸಿ ಸುಪ್ರಿತಾ ಪ್ರಸಾದ್ ಶೆಟ್ಟಿ ಹಾಗೂ ಶಾಲಾ ಶಿಕ್ಷಕರು, ಇಕೋ ಕ್ಲಬ್ನ ಸದಸ್ಯರು ಹಾಗೂ 200ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು ಸುಮಾರು 15ಕ್ಕೂ ಹೆಚ್ಚು ವಿವಿಧ ತಳಿಗಳ ಕಸಿ ಗಿಡಗಳನ್ನು ಉದ್ಯಾನವನದಲ್ಲಿ ನೆಡಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.