logo
WhatsApp Image 2026-04-02 at 14.46.04.jpeg
hindalco everlast.jpeg

ಯಡ್ತಾಡಿ : ಕಲ್ಲುಕೋರೆಗೆ ಬಿದ್ದು ಮಹಿಳೆ ಸಾವು

ಟ್ರೆಂಡಿಂಗ್
share whatsappshare facebookshare telegram
16 Aug 2022
post image

ಬ್ರಹ್ಮಾವರ: ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಹಂಚಿನಕೆರೆ ಬಳಿಯ ಕಲ್ಲುಕೋರೆಯಲ್ಲಿ ಆ.15ರಂದು ಮಧ್ಯಾಹ್ನ ನಡೆದಿದೆ. ಯಡ್ತಾಡಿ ಗ್ರಾಮದ ಹಂಚಿನಕೆರೆ ನಿವಾಸಿ 65ವರ್ಷದ ಸೀತು ಮರಕಾಲ್ತಿ ಮೃತದುರ್ದೈವಿ. ಇವರು ಆ.13ರಿಂದ ಕಾಣೆಯಾಗಿದ್ದರು. ಇವರು ಪ್ರತಿದಿನ ಬೆಳಿಗ್ಗೆ 5.30ಕ್ಕೆ ದನಕ್ಕೆ ಹುಲ್ಲು ತರಲು ಮನೆಯಿಂದ ಗದ್ದೆಗೆ ಹೋಗುತ್ತಿದ್ದರು. ಆ. 15ರಂದು ಕೂಡ ಬೆಳಿಗ್ಗೆ ಹುಲ್ಲು ತರಲು ಹೋಗಿದ್ದು, ಅಲ್ಲೆ ಪಕ್ಕದಲ್ಲಿದ್ದ ಕಲ್ಲುಕೋರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.