logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕರ್ನಾಟಕ ಯಕ್ಷಗಾನ ಅಕಾಡೆಮಿಯು “೨೦೨೧ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭ

ಟ್ರೆಂಡಿಂಗ್
share whatsappshare facebookshare telegram
30 Mar 2022
post image

ಕಾರ್ಕಳ: ಕರ್ನಾಟಕ ಯಕ್ಷಗಾನ ಅಕಾಡೆಮಿಯು “೨೦೨೧ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ೨೦೨೦ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ:೦೧ ಏಪ್ರಿಲ್ ೨೦೨೨ರಂದು ಮಧ್ಯಾಹ್ನ:೦೩.೦೦ ಗಂಟೆಗೆ ಶ್ರೀ ಭುವನೇಂದ್ರ ಕಾಲೇಜ್, ಕಾರ್ಕಳ ಇಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು, ಜೈನ ಮಠ, ಮೂಡಬಿದಿರೆ ಇವರು ವಹಿಸುವರು, ಶ್ರೀ ಅಂಗಾರ, ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಇವರು ಉದ್ಘಾಟನೆಯನ್ನು ನೆರವೇರಿಸುವರು, ಶ್ರೀ ವಿ.ಸುನಿಲ್ ಕುಮಾರ್, ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಇವರು ಪ್ರಶಸ್ತಿ ಪ್ರದಾನ ಮಾಡುವರು, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಇವರು ಕಿರುಪರಿಚಯ ಪುಸ್ತಕ ಬಿಡುಗಡೆ ಮಾಡುವರು, ಡಾ.ಜಿ.ಎಲ್.ಹೆಗಡೆ, ಕುಮಟಾ, ಮಾನ್ಯ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯಅತಿಥಿಗಳಾಗಿ ಶೋಭಾ ಕರಂದ್ಲಾಜೆ, ಮಾನ್ಯ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರು, ಶ್ರೀ ಕೆ.ಜಯಪ್ರಕಾಶ ಹೆಗ್ಡೆ, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಶ್ರೀ ಬಿ.ವೈ.ರಾಘವೇಂದ್ರ, ಮಾನ್ಯ ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಮಾನ್ಯ ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು, ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ, ಮಾನ್ಯ ಶಾಸಕರು, ಬೈಂದೂರು ವಿಧಾನ ಸಭಾಕ್ಷೇತ್ರ, ಶ್ರೀ ಆಯನೂರು ಮಂಜುನಾಥ, ಮಾನ್ಯ ಶಾಸಕರು, ವಿಧಾನ ಪರಿಷತ್, ಶ್ರೀ ಎಸ್.ಎಲ್, ಭೋಜೇಗೌಡ, ಮಾನ್ಯ ಶಾಸಕರು, ವಿಧಾನ ಪರಿಷತ್, ಡಾ.ತೇಜಸ್ವಿನಿ ಗೌಡ, ಮಾನ್ಯ ಶಾಸಕರು, ವಿಧಾನ ಪರಿಷತ್, ಡಾ.ವಿ.ಮಂಜುನಾಥ ಭಂಡಾರಿ, ಮಾನ್ಯ ಶಾಸಕರು, ವಿಧಾನಪರಿಷತ್, ಶ್ರೀಮತಿ ಸುಮಾ ಕೇಶವ್, ಮಾನ್ಯ ಅಧ್ಯಕ್ಷರು, ಪುರಸಭೆ, ಕಾರ್ಕಳ ಇವರುಗಳು ಭಾಗವಹಿಸುವರು. ಅತಿಥಿಗಳಾಗಿ ಶ್ರೀ ಕೂರ್ಮಾ ರಾವ್.ಎಂ. ಭಾ.ಆ.ಸೇ., ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ, ಡಾ.ನವೀನ್ ಭಟ್.ವೈ., ಭಾ.ಆ.ಸೇ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್, ಉಡುಪಿ, ಶ್ರೀ ಎನ್.ವಿಷ್ಣುವರ್ಧನ್, ಭಾ.ಪೋ.ಸೇ., ಪೋಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ, ಶ್ರೀ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಕ.ಆ.ಸೇ., ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಡಾ.ಹೆಚ್.ಎಸ್.ಬಲ್ಲಾಳ್, ಸಹ ಕುಲಾಧಿಪತಿಗಳು, ಮಾಹೆ, ಮಣಿಪಾಲ್, ಶ್ರೀ ಸಿ.ಎ.ಶಿವಾನಂದ ಪೈ, ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ, ಡಾ.ಮಂಜುನಾಥ್.ಎ.ಕೋಟ್ಯಾನ್, ಪ್ರಾಂಶುಪಾಲರು, ಶ್ರೀ ಭುವನೇಂದ್ರ ಕಾಲೇಜ್, ಕಾರ್ಕಳ, ಶ್ರೀ ಪ್ರದೀಪ್ ಕುರುಡೇಕರ್.ಎಸ್, ತಹಶೀಲ್ದಾರ್, ಕಾರ್ಕಳ, ಶ್ರೀ ಎಂ.ಎನ್.ಗುರುದತ್, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯತ್, ಕಾರ್ಕಳ, ಶ್ರೀಮತಿ ಪೂರ್ಣಿಮಾ, ವಿಶೇಷ ಕರ್ತವ್ಯಾಧಿಕಾರಿ, ಯಕ್ಷರಂಗಾಯಣ ಕಾರ್ಕಳ ಹಾಗೂ ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಇವರುಗಳು ಭಾಗವಹಿಸುವರು.

ವಿಶೇಷ ಆಕರ್ಷಣೆಯಾಗಿ ಹೆಸರಾಂತ ಕಲಾವಿದರಿಂದ ಮಧ್ಯಾಹ್ನ:೦೨.೦೦ ಗಂಟೆಗೆ ತಾಳಮದ್ದಳೆ-‘ಶಲ್ಯ ಸಾರಥ್ಯ’ ದ ಹಿಮ್ಮೇಳನದಲ್ಲಿ ಶಿವಶಂಕರ ಬಲಿಪ, ಚಂದ್ರಶೇಖರ ಭಟ್ ಕೊಂಕಣಾಜೆ, ರವಿರಾಜ ಜೈನ್ ಕಾರ್ಕಳ, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಪವನ ಕಿರಣ್‌ಕೆರೆ, ಶ್ರೀರಮಣ ಆಚಾರ್ಯ, ಕಾರ್ಕಳ, ಇವರುಗಳು ನಡೆಸುವರು. ಪ್ರಶಸ್ತಿ ಪ್ರದಾನದ ನಂತರ ಸಂಜೆ:೦೬.೦೦ ಗಂಟೆಗೆ ಯಕ್ಷಗಾನ-‘ಪಾರಿಜಾತ ನರಕಾಸುರ’ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ(ರಿ) ಬೆಳುವಾಯಿ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನ ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಯಪದವು, ಪದ್ಮನಾಭ ಉಪಾಧ್ಯ, ಉಜಿರೆ, ಎಂ.ದೇವಾನAದ್ ಭಟ್ ಬೆಳ್ವಾಯಿ, ರವಿಪ್ರಸಾದ ಕೆ ಶೆಟ್ಟಿ, ಮೂಡಬಿದ್ರೆ, ಮುಮ್ಮೇಳದಲ್ಲಿ ಕೃಷ್ಣ ಲಕ್ಷö್ಮಣ ಮರಕಡ, ನಾರದ ತುಂಬೆ ಚಂದ್ರಹಾಸ, ಮಕರಂದ ಮೌವ್ವರ್ ಬಾಲಕೃಷ್ಣ ಮಣಿಯಾಣಿ, ಸಖಿ ಗುರುತೇಜ ಶೆಟಿ, ಓಡಿಯೂರ್, ಸತ್ಯಭಾಮಾ ಡಾ.ಮಹೇಶ್ ಕುಮಾರ್ ಸಾಣೂರು, ದೇವೇಂದ್ರ ಡಾ.ಶೃತ ಕೀರ್ತಿ ರಾಜ, ಉಜಿರೆ, ಮುರಾಸುರ ಚಂದ್ರಮAಡಲ ಗಣೇಶ್, ನರಕಾಸುರ ಯಶೋಧರ್ ಪಂಜ. ಇವರುಗಳು ನಡೆಸುವರು.

ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ೫ ಗೌರವ ಪ್ರಶಸ್ತಿ ಪುರಸ್ಕೃತರಾದಜ್ಶಿçà ಸತ್ಯನಾರಾಯಣ ವರದ ಹಾಸ್ಯಗಾರ, ಶ್ರೀ ಮುತ್ತಪ್ಪ ತನಿಯ ಪೂಜಾರಿ, ಶ್ರೀ ಎಸ್.ಬಿ.ನರೇಂದ್ರ ಕುಮಾರ್, ಶ್ರೀ ಮೂಡಲಗಿರಿಯಪ್ಪ, ಶ್ರೀ ಎನ್.ಟಿ.ಮೂರ್ತಾಚಾರ್ಯ, ೧೦ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀ ಗೋಪಾಲ ಗಾಣಿಗ ಆಜ್ರಿ, ಶ್ರೀ ಬೋಳಾರ ಸುಬ್ಬಯ್ಯ ಶೆಟ್ಟಿ, ಶ್ರೀ ಸೀತೂರು ಅನಂತ ಪದ್ಮನಾಭರಾವ್, ಶ್ರೀ ಕಡತೋಕ ಲಕ್ಷಿö್ಮÃನಾರಾಯಣ ಶಂಭು ಭಾಗವತರು, ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ, ಶ್ರೀ ಕೊಕ್ಕಡ ಈಶ್ವರ ಭಟ್, ಶ್ರೀ ಅಡಿಗೋಣ ಬೀರಣ್ಣ ನಾಯ್ಕ, ಶ್ರೀ ಭದ್ರಯ್ಯ, ಶ್ರೀ ಬಸವರಾಜಪ್ಪ ಹಾಗೂ ೨೦೨೦ನೇ ಸಾಲಿನ ೦೨ ಪುಸ್ತಕ ಬಹುಮಾನಿತರಾದ ಡಾ.ಕೆ.ರಮಾನಂದ ಬನಾರಿ, ಡಾ.ಹೆಚ್.ಆರ್.ಚೇತನ ಇವರುಗಳು ಭಾಗವಹಿಸುವರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.