



ಮಂಗಳೂರು: ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ 96 ವಯಸ್ಸಿನ ಸೂರಿಕುಮೇರು ಕೆ ಗೋವಿಂದ ಭಟ್ ಹೇಳಿದರು. ಅವರು ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ಇದೇ ಸಂದಂರ್ಭದಲ್ಲಿ ‘ಯಕ್ಷ ಕುಸುಮ ಯುವ ಪುರಸ್ಕಾರ’ವನ್ನು ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್ ಎಸ್ ನಾಯಕ್, ಮಂಗಳೂರು ರಂಗಸ್ಥಳ ಮಂಗಳೂರು (ರಿ) ಸಂಸ್ಥೆಯ ಶ್ರೀ ಎಸ್ ಎಲ್ ನಾಯಕ್ ಮತ್ತು ಶ್ರೀ ದಿನೇಶ್ ಪೈ, ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನರೇಂದ್ರ ಎಲ್ ನಾಯಕ್, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ ಯಜಮಾನರಾದ ರಂಜಿತ್ ಕುಮಾರ್ ವಕ್ವಾಡಿ, ಶ್ರೀಪತಿ ಆಚಾರ್ಯ, ಯಕ್ಷ ಕುಸುಮ ಪ್ರತಿಷ್ಠಾನ ಅಧಕ್ಷರಾದ ಕರುಣಾಕರ ಬಳ್ಕೂರು, ಅಥರ್ವ ಕೆ.ಬಳ್ಕೂರು ಉಪಸ್ಥಿತರಿದ್ಧರು. ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾನಕ ಪ್ರದರ್ಶನವು ನಡೆಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.