



ಹೆಬ್ರಿ : ಯುವ ಸಮುದಾಯ ಸೇನೆಯನ್ನು ಸೇರಿ ಆ ಮೂಲಕ ದೇಶಸೇವೆಯನ್ನು ಮಾಡಿ. ಸೇನೆ ಸೇರಲು ಬೇಕಾದ ಅಗತ್ಯ ನೆರವನ್ನು ತಾನು ನೀಡುವುದಾಗಿ ಯುವಕರಿಗೆ ಸೇನೆಯಲ್ಲಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಲೆಪ್ಟಿನೆಂಟ್ ಕರ್ನಲ್ ಆಗಿ ನಿವೃತ್ತರಾದ ಹೆಬ್ರಿಯ ಜಗದೀಶ ಎಚ್ ಸ್ಪೂರ್ತಿ ತುಂಬಿದರು.
ಅವರು ರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‌ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ನಡೆದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಬ್ರಿ ತಾಲ್ಲೂಕಿನಲ್ಲಿ ಸೇನೆಯಲ್ಲಿ ಅತ್ಯಂತ ದೊಡ್ಡ ಹುದ್ದೆಯನ್ನು ಆಲಂಕರಿಸಿದವರಲ್ಲಿ ಹೆಬ್ರಿಯ ಜಗದೀಶ್ ಮೊದಲಿಗರು. ನನ್ನ ಸಹಪಾಠಿಯೂ ಆಗಿರುವ ಜಗದೀಶ್ ಅವರ ಅಂದಿನ ಕಠಿಣ ಪರಿಶ್ರಮ ಶೃದ್ಧೆಯೇ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು. ಜಗದೀಶ್ ನಮ್ಮೂರಿನ ಹೆಮ್ಮೆ ಎಂದು ಅಭಿನಂದಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‌ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ್‌ರಾವ್, ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಮುಖ್ಯಸ್ಥೆ ಡಾ. ಭಾರ್ಗವಿ ಆರ್ ಐತಾಳ್, ಹಿರಿಯ ಸಮಾಜ ಸೇವಕ ಎಚ್.ಭಾಸ್ಕರ ಜೋಯಿಸ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‌ಉಡುಪಿ ಜಿಲ್ಲಾ ನಿರ್ದೇಶಕರಾದ ಮುರಳೀಧರ ಭಟ್, ಸೀತಾನದಿ ವಿಜೇಂದ್ರ ಶೆಟ್ಟಿ, ಜಿಲ್ಲಾ ಸಂಚಾಲಕ ಸುಕುಮಾರ್‌ಮುನಿಯಾಲ್, ಹೆಬ್ರಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಟಿ.ಜಿ.ಆಚಾರ್ಯ,ಕಾರ್ಯದರ್ಶಿ ಕಬ್ಬಿನಾಲೆ ಶ್ರೀಧರ ಹೆಬ್ಬಾರ್ ಕಾಪೋಳಿ ಕೋಶಾಧಿಕಾರಿ ಎಚ್.ಜನಾರ್ಧನ್, ಬೇಳಂಜೆ ಹರೀಶ ಪೂಜಾರಿ, ಮಹಿಳಾ ವಿಭಾಗದ ಸುಧಾ ಗಣೇಶ ನಾಯಕ್, ಸುನೀತಾ ಎ ಹೆಗ್ಡೆ, ಶಶಿಕಲಾ ಪೂಜಾರಿ, ನಿರ್ದೇಶಕ ಬಲ್ಲಾಡಿ ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.