



ಬೀಜಿಂಗ್: ಯುವಕರು, ಮಕ್ಕಳು ಮೊಬೈಲ್‌ನಲ್ಲಿ ರಾತ್ರಿ ಇಂಟರ್‌ನೆಟ್ ಬಳಸಲು ಕಡಿವಾಣ ಹಾಕಲು ಚೀನಾ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಚೀನಾದಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗೆ ರಾತ್ರಿ ವೇಳೆ ಇಂಟರ್‌ನೆಟ್ ಬಳಕೆ ಮಾಡದಂತೆ ಕಡಿವಾಣ ಹಾಕುತ್ತಿದ್ದು, ಈ ನಿಯಮವು ಇದೇ ವರ್ಷದ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ.
ಮೊಬೈಲ್ ಬಳಕೆಯ ಗೀಳಿನಿಂದ ಮಕ್ಕಳು ಮತ್ತು ಹದಿಹರೆಯದವರನ್ನು ಹೊರತರುವ ಉದ್ದೇಶದಿಂದ ಬುಧವಾರ ಹೊಸ ನಿಯಮಗಳನ್ನು ಚೀನಾ ಪ್ರಕಟಿಸಿದೆ. ಈ ನಿಯಮಗಳಡಿ ಮಕ್ಕಳು ಮತ್ತು ಹದಿಹರೆಯದವರು ರಾತ್ರಿ ವೇಳೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದನ್ನು ನಿರ್ಬಂಧಿಸಲಿದೆ.
ಈ ನಿರ್ಬಂಧಗಳು ಸಾರ್ವಜನಿಕ ಸಮಾಲೋಚನೆಯ ನಂತರ ಸೆಪ್ಟೆಂಬರ್ 2ರಿಂದ ಜಾರಿಗೆ ಬರಲಿವೆ. ಈ ನಿರ್ಬಂಧಗಳಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮೊಬೈಲ್ ಸಾಧನದೊಂದಿಗೆ ಇಂಟರ್ನೆಟ್ ಸಂಪರ್ಕ ಪಡೆಯುವುದನ್ನು ಕಡಿತಗೊಳಿಸಲಾಗುತ್ತದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.