logo
WhatsApp Image 2026-04-02 at 14.46.04.jpeg
hindalco everlast.jpeg

:ಸಾಲ ಮರುಪಾವತಿಸಲಾಗದೆ ಯುವಕ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
11 Feb 2022
post image

ಕಾರ್ಕಳ :ಸಾಲ ಮರುಪಾವತಿಸಲಾಗದೆ ಯುವಕನೊಬ್ಬ ಓಮ್ನಿಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಸೋಮೇಶ್ವರ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಗಿಣಿಕಲ್ ನಿವಾಸಿ ಜಿ. ಎನ್. ಲೋಕಣ್ಣ (೫೪) ಆತ್ಮಹತ್ಯೆ ಗೆ ಶರಣಾದವರು .
ಅಡಿಕೆ ತೋಟಕ್ಕೆ ರೋಗ ತಗುಲಿ ನಿರೀಕ್ಷಿತ ಫಸಲು ಬಂದಿರಲಿಲ್ಲ ಹಾಗೆಯೆ ಕೃಷಿಯಲ್ಲಿ ನಷ್ಟವಾಗಿದ್ದ ಕಾರಣ ಬ್ಯಾಂಕ್ ಹಾಗೂ ಸೊಸೈಟಿಯಲ್ಲಿ ಮಾಡಿದ ಸಾಲ ಮರುಪಾವತಿಸಲಾಗದ ಹಿನ್ನೆಲೆಯಲ್ಲಿ ಸಾಲಭಾದೆ ತಾಳಲಾರದೇ ಫೆ. ೧೦ ರಂದು ಸೋಮೇಶ್ವರ ಘಾಟಿಯ ೨ನೇ ತಿರುವಿನಲಿ ತನ್ನ ಓಮ್ನಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತು ಲೋಕಣ್ಣ ಅವರು ವಿಷ ಪದಾರ್ಥ ಸೇವಿಸಿದ್ದಾರೆ . ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.