



ಮಂಗಳೂರು: ನಗರದ ಹೊರವಲಯದ ತುಂಬೆ ಬಳಿ
ದ.ಕ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರಿನ ಗಾಜು ಪುಡಿಮಾಡಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಿಂದ ಪುತ್ತೂರಿಗೆ ಜಿಲ್ಲಾ ಪಂಚಾಯಿತಿ
ವಾಹನ ವೊಂದರಲ್ಲಿ ಚಾಲಕ ದೇವದಾಸ್ ಅವರು ಅಧಿಕಾರಿಗಳನ್ನು ಕರೆದ್ಯೋತ್ತಿದ್ದರು. ಆ ವೇಳೆ ತುಂಬೆ ಸಮೀಪ ಜಿಲ್ಲಾ ಪಂಚಾಯಿತಿ ಕಾರಿನ ಮುಂಭಾಗದ ವಾಹನ ಬ್ರೇಕ್ ಹಾಕಿದ್ದಾರೆ. ಅ ವೇಳೆ ಜಿಪಂ ವಾಹನ ಚಾಲಕ ಕೂಡ ಬೇಕ್ ಹಾಕಿದ್ದಾರೆ. ಅದೇ ಸಮಯದಲ್ಲಿ
ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಶಂಸುದೀನ್ ಕೂಡ ಬೇಕ್ ಹಾಕಿದ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಇದರಿಂದ ಕೋಪಗೊಂಡ ಆತ ದ್ವಿಚಕ್ರ ವಾಹನವನ್ನು ಕಾರಿಗೆ ಅಡ್ಡ ಗಟ್ಟಿ, ಕಾರಿನ ಮಿರರ್ ಅನ್ನು ಪುಡಿ ಮಾಡಿದ್ದಲ್ಲದೆ, ವಾಹನ ಚಾಲಕನನ್ನು ಹಾಗೂ ಮಹಿಳಾ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಜೀಪ ಕೊಣೆಮಾರ್ ನಿವಾಸಿ ಸಂಶುದೀನ್ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.